ನಾಪೋಕ್ಲು, ಮಾ. ೧೦: ಕಕ್ಕಬ್ಬೆ ಸಮೀಪದ ಕುಂಜಿಲ ಪಯ್ನರಿ ಉರೂಸ್ ತಾ. ೧೧ ರಿಂದ ೧೫ ರವರೆಗೆ ನಡೆಯಲಿದೆ ಎಂದು ಜಮಾಅತ್ ಆಡಳಿತ ಮಂಡಳಿ ತಿಳಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಕಾರ್ಯದರ್ಶಿ ಅಜೀಜ್ ಮಾಸ್ಟರ್ ತಾ. ೧೧ ರಂದು ಉರೂಸ್ ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಎಂ.ಎ. ಶೌಕತ್ ಆಲಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾದುಲಿ ಪೈಝಿ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖಶಿರ್ ಅಹ್ಸನಿ ಅಲ್ ಕಾಮಿಲಿ ಮಾಡಲಿದ್ದು, ಮುಖ್ಯ ಭಾಷಣಕಾರ ರಾಗಿ ಅಸ್ಸಯ್ಯಿದ್ ಫಝಲ್ ಸೀದಿ ಅಹ್ಸನಿ ಅಲ್ ಹೈದರೂಸಿ ಮತ್ತು ಎಂ.ಎ. ಅಬ್ದುಲ್ಲ ಸಖಾಫಿ ಪಾಲ್ಗೊಳ್ಳಲಿದ್ದಾರೆ.
ತಾ. ೧೪ ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ತಾ. ೧೪ ರಂದು ಮಧ್ಯಾಹ್ನ ೨ ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಎಂ.ಎ. ಶೌಕತ್ ಆಲಿ ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಡಾ. ಎಂ. ಅಬ್ದುಲ್ಲ ಹಕ್ಕಿಂ ಅಝ್ಹರಿ ಕಾಂತಪುರ ಭಾಗವಹಿಸಲಿದ್ದಾರೆ. ಉದ್ಘಾಟನೆಯನ್ನು ಮುಬಶ್ಶಿರ್ ಅಹ್ಸನಿ ಅಲ್ ಕಾಮಿನಿ ನೆರವೇರಿಸಲಿದ್ದು, ಪ್ರಾರ್ಥನೆಯನ್ನು ಅಸ್ಸಯ್ಯಿದ್ ಇಲ್ಯಾಸ್ ಅಖಾಫಿ ಅಲ್ ಹೈದರೂಸಿ ಮಾಡುವರು ಅತಿಥಿಗಳಾಗಿ ಕೆ.ಎಂ. ಇಬ್ರಾಹಿಂ ಮಾಸ್ಟರ್, ಕಲಿಯಂಡ ಸಂಪನ್ ಅಯ್ಯಪ್ಪ, ಉದಿಯಂಡ ಸುಭಾಶ್, ಇಸ್ಮಾಯಿಲ್ ಸಖಾಫಿ, ಮಹಮ್ಮದ್ ಹಾಜಿ, ಹಪೀಳ್ ಸಅದಿ, ಮೆಹಬೂಬ್ ಮಾಸ್ಟರ್, ಅಬ್ದುಲ್ ರಜಾಕ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಕುಂಜಿಲ ಪಯ್ನರಿ ಜಮಾಅತ್ ಅಧ್ಯಕ್ಷ ಶೌಕತ್ ಆಲಿ, ಉಪಾಧ್ಯಕ್ಷ ಕುಂಡAಡ ಇಬ್ರಾಹಿಂ (ಇಬು), ಸಲಹಾ ಸಮಿತಿ ಸದಸ್ಯ ಪಯ್ಯಡಿ ಹಂಸ, ಅಡಳಿತ ಮಂಡಳಿ ಸದಸ್ಯ ಎ.ಇ. ಇರ್ಷಾದ್ ಉಪಸ್ಥಿತರಿದ್ದರು.