ಮಡಿಕೇರಿ, ಮಾ. ೯: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಅಧಿಕಾರಾವಧಿಯಲ್ಲಿ ಹಲವಾರು ಅಂಗಡಿ ಮಳಿಗೆಗಳು ಗ್ರಾಮ ಪಂಚಾಯಿತಿಯಿAದ ಲೈಸನ್ಸ್ ಪಡೆಯದೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಗಣಪತಿ ಮತ್ತು ಪಿಡಿಓ ಮನ್ ಮೋಹನ್, ಕಾರ್ಯದರ್ಶಿ ಮೋಹನ್ ಅಂಗಡಿಗಳಲ್ಲಿ ಪರಿಶೀಲನೆ ಮಾಡಿದರು. ಪರವಾನಗಿ ಪಡೆಯದೇ ವ್ಯಾಪಾರ ನಡೆಸುತ್ತಿರುವವರಿಗೆ ಅಂಗಡಿ ಮುಚ್ಚುವ ಅಥವಾ ದಂಡ ವಿಧಿಸುವ ಹಾಗೂ ಪರವಾನಗಿ ನವೀಕರಿಸದೆ ಇರುವವರಿಗೆ ೭ ದಿನಗಳಲ್ಲಿ ಹಣ ಕಟ್ಟಿ ನವೀಕರಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದರು.