ವೀರಾಜಪೇಟೆ, ಮಾ. ೯: ಹಿಮಪಾತಕ್ಕೆ ಸಿಲುಕಿ ಸಾವಿಗೀಡಾದ ಯೋಧ ಅಲ್ತಾಫ್ ಅಹಮ್ಮದ್ ಅವರ ಕುಟುಂಬಕ್ಕೆ ವಿರೋಧ ಪಕ್ಷದ ಉಪನಾಯಕರು, ಮಾಜಿ ಸಚಿವ ಯು.ಟಿ ಖಾದರ್ ಧನ ಸಹಾಯ ಮಾಡಿದ್ದಾರೆ.
ಯು.ಟಿ. ಖಾದರ್ ಅವರು ಹುತಾತ್ಮ ಯೋಧ ಅಲ್ತಾಫ್ ಅವರ ಪತ್ನಿ ಮತ್ತು ಮಕ್ಕಳು ವಾಸವಿರುವ ಎಡಪಾಲದ ನಿವಾಸದಲ್ಲಿ ಭೇಟಿ ಮಾಡಿ ಮೃತ ಯೋಧರ ಮಕ್ಕಳಿಗೆ ತಲಾ ೫೦ ಸಾವಿರ ರೂಪಾಯಿಗಳ ಚೆಕ್ ವಿತರಿಸಿದರು. ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿದರು.
ಚೆನ್ನಯ್ಯನಕೊಟೆ ನಿವಾಸದಲ್ಲಿರುವ ಮೃತ ಯೋಧರ ತಾಯಿಯನ್ನು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಭೇಟಿ ಮಾಡಿ ಮಾಜಿ ಸಚಿವರು ನೀಡಿದÀ ೫೦ ಸಾವಿರ ರೂ.ಗಳ ಚೆಕ್ನ್ನು ವಿತರಿಸಿದರು. ಈ ಸಂದರ್ಭ ಚೆನ್ನಯ್ಯನಕೋಟೆ ವಲಯ ಅಧ್ಯಕ್ಷ ಸುರೇಶ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಮೀದ್, ಅಸಂಘಟಿತ ಕಾರ್ಮಿಕರ ಜಿಲ್ಲಾ ಉಪಾಧ್ಯಕ್ಷ ಸತೀಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಾನ್ಸನ್, ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸೆÀ್ಯ ಜಾನಕಿ, ಶಭೀರ್, ಪ್ಯಾಟ್ರಿಕ್ ಇದ್ದರು.