ಕಣಿವೆ, ಮಾ. ೧೦: ಕಾಫಿ ತೋಟದಲ್ಲಿ ಕಾಳು ಮೆಣಸು ಕೊಯ್ಲು ಮಾಡುತ್ತಿದ್ದ ಯುವಕನೋರ್ವ ವಿದ್ಯುತ್ ಅವಘಡಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಂಗಸಮುದ್ರದಲ್ಲಿ ಗುರುವಾರ ಸಂಭವಿಸಿದೆ.
ರAಗಮುದ್ರದ ಬಿ.ಕಾಂ. ಪದವೀಧರ ನೆಕ್ಕೆರೆ ದೀಕ್ಷಿತ್ (೨೨) ಮೃತ ದುರ್ದೈವಿ. ವಿದ್ಯಾಭ್ಯಾಸ ಮುಗಿಸಿದ್ದ ದೀಕ್ಷಿತ್ ಬೆಂಗಳೂರು ಮೂಲದವರೊಬ್ಬರಿಗೆ ಸೇರಿದ, ಭೋಗ್ಯಕ್ಕೆ ಪಡೆದಿದ್ದ ಗ್ರಾಮದ ಕಾಫಿ ತೋಟದಲ್ಲಿನ ಮರಕ್ಕೆ ಅಲ್ಯುಮಿನಿಯಂ ಏಣಿ ಬಳಸಿ ಕಾಳು ಮೆಣಸು ಕೊಯ್ಲು ಮಾಡುವಾಗ ಸಮೀಪದಲ್ಲೇ ಇದ್ದ ವಿದ್ಯುತ್ ತಂತಿ ಏಣಿಗೆ ತಾಗಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ. ಈತ ಗ್ರಾಮದ ನವೀನ್ ಎಂಬವರ ಪುತ್ರ. ಈ ಸಂಬAಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.