ಸಿದ್ದಾಪುರ, ಮಾ. ೧೦: ಮನೆ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನೆಲ್ಲಿಹುದಿಕೇರಿ ಗ್ರಾಮದ ಕುಂಬಾರಗುAಡಿಯಲ್ಲಿ ನಡೆದಿದೆ. ಕುಂಬಾರಗುAಡಿ ನಿವಾಸಿ ಸುಭಾಷ್ ಎಂಬವರ (ಕೆ.ಎ. ೧೨ ಯು. ೫೨೪೬) ಹೋಂಡಾ ಶೈನ್ ಬೈಕಿಗೆ ದುಷ್ಕರ್ಮಿಗಳು ರಾತ್ರಿವೇಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.