ವೀರಾಜಪೇಟೆ, ಮಾ. ೧೦: ಲೈನ್‌ಮನೆಯಲ್ಲಿ ವಾಸವಿದ್ದ ಒಂಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ ಕೊಲೆ ಮಾಡಿರುವ ಆರೋಪದಡಿಯಲ್ಲಿ ಈರ್ವರು ಕಾರ್ಮಿಕರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ವೀರಾಜಪೇಟೆ ತಾಲೂಕು ಮಾಲ್ದಾರೆ ಗ್ರಾಮದ ನಿವಾಸಿ ಪ್ರಸ್ತುತ ವಿ,ಬಾಡಗ ಎಂ. ರಾಜ ಚೆಂಗಪ್ಪ ಅವರ ಲೈನ್ ಮನೆಯಲ್ಲಿ ವಾಸವಿರುವ ಕಾರ್ಮಿಕ ಪಂಜರಿಎರವರ ಸುರೇಶ್ (೩೦) ವಿ.ಬಾಡಗ ಗ್ರಾಮದ ಟಿ. ಮನು ಮುತ್ತಪ್ಪ ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಣಿಎರವರ ಸುಬ್ರಮಣಿ (೨೮) ಬಂಧಿತ ಆರೋಪಿಗಳು.

ವಿ.ಬಾಡಗ ಗ್ರಾಮದ ಮಳವಂಡ ಪೂಣಚ್ಚ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಣಿಎರವರ ಕುಳಿಯ ಅವರ ಪತ್ನಿ ಚಿಮ್ಮಿಯನ್ನು ಕಳೆದ ತಾ. ೨ ರಂದು ಹತ್ಯೆಮಾಡಲಾಗಿತ್ತು. ಈ ಸಂಬAಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವೃತ್ತ ನೀರಿಕ್ಷಕ ಬಿ.ಎಸ್.ಶ್ರೀಧರ್ ಅವರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದು, ಬಸವನಹಳ್ಳಿಯ ಅಕ್ಕನ ನಿವಾಸದಲ್ಲಿ ಅವಿತಿದ್ದ ಆರೋಪಿ ಸುರೇಶ್ ಮತ್ತು ಸುಬ್ರಮಣಿಯನ್ನು ವಿ.ಬಾಡಗ ಗ್ರಾಮದ ಲೈನ್ ಮನೆಯೊಂದರಲ್ಲಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿಡುವAತೆ ಆದೇಶ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲಚೀರ ಎ. ಅಯ್ಯಪ್ಪ ಅವರ ಆದೇಶದ ಮೇರೆಗೆ ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿ ವೀರಾಜಪೇಟೆ ವೃತ್ತ ನೀರಿಕ್ಷಕರಾದ ಬಿ.ಎಸ್. ಶ್ರೀಧರ್ ಅವರ ನೇತೃತ್ವದಲ್ಲಿ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಭಿ. ಬಾಣಸೆ, ಎ.ಎಸ್.ಐ. ನಾಣಿಯಪ್ಪ, ಸಿಬ್ಬಂದಿಗಳಾದ ರಾಮಪ್ಪ, ತೀರ್ಥಕುಮಾರ್, ಶ್ರೀಕಾಂತ್ ಕೆಂದೂರ ಮತ್ತು ರವಿ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಕಿಶೋರ್‌ಕುಮಾರ್ ಶೆಟ್ಟಿ