ಮಡಿಕೇರಿ, ಮಾ. ೧೦: ತಾ. ೧೨ ಹಾಗೂ ತಾ. ೧೩ ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಶಾಖೆಯ ಅಧ್ಯಕ್ಷ ಶ್ರೀನಿವಾಸ ಅವರು ಮಾಹಿತಿ ನೀಡಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆ ತಾ. ೧೩ರ ಪೂರ್ವಾಹ್ನ ೧೦.೩೦ ಗಂಟೆಗೆ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಸಿ.ಎಸ್. ನೆರವೇರಿಸಲಿದ್ದಾರೆ ಎಂದರು.

ಕ್ರೀಡಾಕೂಟಕ್ಕೆ ಈಗಾಗಲೇ ಮಡಿಕೇರಿ ತಾಲೂಕಿನಿಂದ ೨೦೦, ಸೋಮವಾರಪೇಟೆ ತಾಲೂಕಿನಿಂದ ೧೭೦, ವೀರಾಜಪೇಟೆ ತಾಲೂಕಿನಿಂದ ೧೫೦ ಕ್ರೀಡಾಪಟುಗಳು ಸೇರಿ ಒಟ್ಟು ೫೨೦ ಕ್ರೀಡಾಪಟುಗಳು ನೋಂದಾಯಿಸಿಕೊAಡಿದ್ದಾರೆ. ನೋಂದಾಯಿಸಿಕೊAಡಿರುವ ಕ್ರೀಡಾಪಟುಗಳು ತಾ. ೧೨ ರಂದು ಬೆಳಿಗ್ಗೆ ೮ ಗಂಟೆಯಿAದ ೧೦ ಗಂಟೆವರೆಗೆ ನೋಂದಾಣಿ ಕೌಂಟರ್‌ನಲ್ಲಿ ತಮಗೆ ಈಗಾಗಲೇ ದೊರೆತಿರುವ ಪ್ರವೇಶ ಪತ್ರವನ್ನು ಮುದ್ರಿಸಿ ತಮ್ಮ ಕಚೇರಿ ಮುಖ್ಯಸ್ಥರಿಂದ ಮೇಲು ಸಹಿ ಮಾಡಿಸಿ ಸಲ್ಲಿಸಬೇಕು ಎಂದರು.

ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ತಾ. ೧೫ರ ಒಳಗಾಗಿ ರಾಜ್ಯ ಸಂಘ ನೀಡಿರುವ hಣಣಠಿh://biಣ.ಟಥಿ/ಞsgeಚಿಞoಜಚಿgu ಈ ಲಿಂಕ್ ಮೂಲಕ ತಮಗೆ ದೊರೆತ ಪ್ರಶಸ್ತಿ ಪತ್ರವನ್ನು ‘ಅಪ್‌ಲೋಡ್’ ಮಾಡುವ ಮೂಲಕ ಕಡ್ಡಾಯವಾಗಿ ನೋಂದಾವಣಿ ಮಾಡಿಕೊಳ್ಳಬೇಕು. ನೋಂದಾವಣಿ ಮಾಡಿಕೊಳ್ಳದ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

ನಿಯಮಾವಳಿಗಳು: ಕ್ರೀಡಾಕೂಟದಲ್ಲಿ ರಾಜ್ಯ ಸರಕಾರದ ಎಲ್ಲಾ ಖಾಯಂ ನೌಕರರು ಭಾಗವಹಿಸಲು ಅರ್ಹರಾಗಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕ್ರೀಡಾಕೂಟದಡಿ ನೇಮಕಗೊಂಡ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.

ಪೊಲೀಸ್ ಇಲಾಖೆ, ಅರಣ್ಯ ಇಲಖೆಗಳಲ್ಲಿ ಸಮವಸ್ತç ವೃಂದಕ್ಕೆ ಪ್ರತ್ಯೇಕ ಕ್ರೀಡಾಕೂಟಗಳಿರುವುದರಿಂದ ಈ ಎರಡೂ ಇಲಾಖೆಗಳ ಕಚೇರಿ ಹಾಗೂ ಲಿಪಿಕ ನೌಕರರು, ಕಚೇರಿ ಸಿಬ್ಬಂದಿ ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಎಂ.ಸಿ., ರಾಜ್ಯ ಪರಿಷತ್ ಸದಸ್ಯ ಜನಾರ್ಧನ್ ಪಿ.ಎಸ್., ಗೌರವಾಧ್ಯಕ್ಷ ಶಮ್ಮಿ ಟಿ.ಎಸ್., ಸಂಘಟನಾ ಕಾರ್ಯದರ್ಶಿ ಬಾಬು, ಜಂಟಿ ಕಾರ್ಯದರ್ಶಿ ನವೀನ್ ಇದ್ದರು.