ಮದೆನಾಡು, ಮಾ. ೧೦: ಮದೆ ಗ್ರಾಮ ಪಂಚಾಯಿತಿ ಸಭೆ ಇತ್ತೀಚೆಗೆ ಪಂಚಾಯಿತಿ ಅಧ್ಯಕ್ಷೆ ಚೆರಿಯಮನೆ ಚಂದ್ರಾವತಿ ಆನಂದ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಅನಧಿಕೃತ ಬಿ.ಪಿ.ಎಲ್. ಕಾರ್ಡ್ದಾರರ ಕಾರ್ಡ್ ರದ್ಧತಿಗೆ ಗ್ರಾಮಸ್ಥರು ಒತ್ತಾಯಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅರಣ್ಯ ಪ್ರದೇಶದ ನಿವಾಸಿಗಳಿಗೆ ವಿದ್ಯುತ್ ಕಲ್ಪಿಸುವುದು, ನರೇಗಾ ಯೋಜನೆಯಡಿಯ ಕಾಮಗಾರಿಗಳಿಗೆ ಬಾಕಿ ಇರುವ ಅನುದಾನ ಬಿಡುಗಡೆಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ಐ.ಎ. ಚಂದ್ರಾವತಿ, ನೋಡಲ್ ಅಧಿಕಾರಿ ಸ್ನೇಹಾ ದರ್ಶನ್, ಅಭಿವೃದ್ಧಿ ಅಧಿಕಾರಿ ಡಿ. ನಂಜುAಡಸ್ವಾಮಿ ಹಾಗೂ ಸದಸ್ಯರು ಹಾಜರಿದ್ದರು.