ಸಿದ್ದಾಪುರ, ಮಾ. ೮: ಸಿದ್ದಾಪುರದ ಶ್ರೀ ಮುತ್ತಪ್ಪ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ೫ ದಿನಗಳ ಕಾಲ ನಡೆಯಿತು. ಗಣಪತಿ ಹೋಮ, ಚಂಡಿಕಾ ಹೋಮ, ಆಶ್ಲೇಷ ಬಲಿಯೊಂದಿಗೆ ಶಾಸ್ತಪ್ಪನ ವೆಳ್ಳಾಟಂ, ವಸೂರಿ ಮಾಲಾವನ್ನು ಕಾವೇರಿ ನದಿಯಿಂದ ಸ್ನಾನ ಮಾಡಿಸಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆತರಲಾಯಿತು. ೫ ದಿನಗಳ ಕಾಲ ನಡೆದ ಉತ್ಸವದ ಕೊನೆಯ ಎರಡು ದಿನ ಗುಳಿಗನ ತೆರೆ, ಶಾಸ್ತಪ್ಪನ, ತಿರುವಪ್ಪನ, ಮುತ್ತಪ್ಪ, ಭಗವತಿ, ವಿಷ್ಣುಮೂರ್ತಿ ತೆರೆಗಳು ನಡೆದವು. ಭಕ್ತರಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು.