ಸುಂಟಿಕೊಪ್ಪ, ಮಾ. ೮: ದೆಹಲಿಯಲ್ಲಿ ನಡೆಯಲಿರುವ ಸರಕಾರಿ ನೌಕರರ ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ತಂಡದ ಆಟಗಾರರಾಗಿ ಕೊಡಗು ಜಿಲ್ಲೆಯಿಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿರುವ ಬಿ.ಹೆಚ್. ವೇಣುಗೋಪಾಲ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯ ಸರಕಾರಿ ನೌಕರರ ತಂಡಕ್ಕೆ ಆಯ್ಕೆಗೊಂಡಿರುವ ಕೊಡಗು ಜಿಲ್ಲೆಯ ಏಕೈಕ ಫುಟ್ಬಾಲ್ ಪಟು ಆಗಿದ್ದಾರೆ. ತಾ. ೧೦ ರಿಂದ ೧೫ ರವರೆಗೆ ದೆಹಲಿಯಲ್ಲಿ ಈ ಪಂದ್ಯಾವಳಿ ನಡೆಯಲಿದೆ.

ರಾಜ್ಯ ತಂಡಕ್ಕೆ ಆಯ್ಕೆಗೊಂಡಿರುವ ಆಟಗಾರ ವೇಣುಗೋಪಾಲ್ ಅವರನ್ನು ಸುಂಟಿಕೊಪ್ಪದ ಬ್ಲೂ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಪಂಚಾಯಿತಿ ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ಎ. ಶಬೀರ್ ಹಾಗೂ ಸನ್ಮಾನ ಸ್ವೀಕರಿಸಿದ ವೇಣುಗೋಪಾಲ್ ಅವರು ಮಾತನಾಡಿದರು. ಈ ಸಂದರ್ಭ ಪಂಚಾಯಿತಿಯ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ಕೆ.ಎಂ. ಆಲಿಕುಟ್ಟಿ, ಹೆಚ್.ಯು. ರಫೀಕ್ ಖಾನ್, ಬ್ಲೂ ಬಾಯ್ಸ್ ಯೂತ್ ಕ್ಲಬ್‌ನ ಎಂ.ಎಸ್. ರವಿ, ಅನಿಲ್ ಕುಮಾರ್, ಸಿ.ಎಸ್. ಸತ್ಯಕುಮಾರ್, ಪವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.