ಸೋಮವಾರಪೇಟೆ, ಮಾ.೮ : ಸಮೀಪದ ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ತಾ. ೧೨ ಮತ್ತು ೧೩ರಂದು ಯಡೂರು ಬಿಟಿಸಿಜಿ ಕಾಲೇಜು ಮೈದಾನದಲ್ಲಿ ೨೩ನೇ ವರ್ಷದ ವೈಸಿಸಿ ಕಪ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಸಿ.ಸಿ. ಲೋಹಿತ್ ತಿಳಿಸಿದ್ದಾರೆ.
ಪಂದ್ಯಾಟದಲ್ಲಿ ವಿಜೇತರಾಗುವ ತಂಡಗಳಿಗೆ ಪ್ರಥಮ ೧೬ ಸಾವಿರ ನಗದು, ದ್ವಿತೀಯ ೧೦ ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ವಿಭಾಗದಲ್ಲೂ ಪ್ರಶಸ್ತಿ ವಿತರಿಸಲಾಗುವುದು ಎಂದರು.