ಕಣಿವೆ, ಮಾ. ೮ : ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಪಟ್ಟಣದ ಮುಖ್ಯ ರಸ್ತೆಯಲ್ಲಿನ ಹಳೆ ಕ್ಯಾರವಾನ್ ಕಟ್ಟಡದ ಬಳಿ ನಿರ್ಮಿಸಿರುವ ಬಡಾವಣೆ ಅನಧಿಕೃತ ವಾಗಿದೆ. ನಾಗರಿಕರು ಹಾಗೂ ಗ್ರಾಹಕರಿಗೆ ಸೌಲಭ್ಯ ಒದಗಿಸಲು ಪೂರಕವಾಗಿ ಮೀಸಲಿಡಬೇಕಿದ್ದ ಜಾಗವನ್ನು ಬಿಡದೆ ಮಾರಾಟ ಮಾಡುವ ಮೂಲಕ ಹತ್ತಾರು ಕೋಟಿ ರೂ.ಗಳ ಸಂಪನ್ಮೂಲ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಸದಸ್ಯ ಬಿ.ಅಮೃತರಾಜು ವಿಷಯ ಪ್ರಸ್ತಾಪಿಸಿದರು.

ಈ ಬಗ್ಗೆ ಸುದೀರ್ಘವಾಗಿ ಎರಡು ಗಂಟೆಗಳ ಕಾಲ ಪರಸ್ಪರ ಚರ್ಚೆ ನಡೆಸಿದ ಸಭೆ, ಅಂತಿಮವಾಗಿ ಈ ಅಕ್ರಮ ಬಡಾವಣೆಗಳ ವಿಚಾರಕ್ಕೆ ಸಂಬAಧಿಸಿದAತೆ ಪ್ರತ್ಯೇಕವಾದ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಭಾಧ್ಯಕ್ಷ ಜಯವರ್ಧನ ತೆರೆ ಎಳೆದರು.

ಕುಶಾಲನಗರ ಪಟ್ಟಣದ ಮಡಿಕೇರಿ ರಸ್ತೆಯ ಸರ್ವೆ ನಂಬರ್ ೧೪೫ ಬಿ ನಲ್ಲಿ ೨.೩೩ ಎಕರೆ ಹಾಗೂ ೧೧೫/೧ ರಲ್ಲಿನ ೧.೬೯ ಎಕರೆ ವಿಸ್ತೀರ್ಣದ ಪೈಕಿ ೧೯ ನಿವೇಶನ ಗಳನ್ನು ಕೆಲವು ಸಂಘ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಖರೀದಿಸಿದ್ದಾರೆ. ಆದರೆ ಇದು ಕಣಿವೆ, ಮಾ. ೮ : ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಪಟ್ಟಣದ ಮುಖ್ಯ ರಸ್ತೆಯಲ್ಲಿನ ಹಳೆ ಕ್ಯಾರವಾನ್ ಕಟ್ಟಡದ ಬಳಿ ನಿರ್ಮಿಸಿರುವ ಬಡಾವಣೆ ಅನಧಿಕೃತ ವಾಗಿದೆ. ನಾಗರಿಕರು ಹಾಗೂ ಗ್ರಾಹಕರಿಗೆ ಸೌಲಭ್ಯ ಒದಗಿಸಲು ಪೂರಕವಾಗಿ ಮೀಸಲಿಡಬೇಕಿದ್ದ ಜಾಗವನ್ನು ಬಿಡದೆ ಮಾರಾಟ ಮಾಡುವ ಮೂಲಕ ಹತ್ತಾರು ಕೋಟಿ ರೂ.ಗಳ ಸಂಪನ್ಮೂಲ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಸದಸ್ಯ ಬಿ.ಅಮೃತರಾಜು ವಿಷಯ ಪ್ರಸ್ತಾಪಿಸಿದರು.

ಈ ಬಗ್ಗೆ ಸುದೀರ್ಘವಾಗಿ ಎರಡು ಗಂಟೆಗಳ ಕಾಲ ಪರಸ್ಪರ ಚರ್ಚೆ ನಡೆಸಿದ ಸಭೆ, ಅಂತಿಮವಾಗಿ ಈ ಅಕ್ರಮ ಬಡಾವಣೆಗಳ ವಿಚಾರಕ್ಕೆ ಸಂಬAಧಿಸಿದAತೆ ಪ್ರತ್ಯೇಕವಾದ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಭಾಧ್ಯಕ್ಷ ಜಯವರ್ಧನ ತೆರೆ ಎಳೆದರು.

ಕುಶಾಲನಗರ ಪಟ್ಟಣದ ಮಡಿಕೇರಿ ರಸ್ತೆಯ ಸರ್ವೆ ನಂಬರ್ ೧೪೫ ಬಿ ನಲ್ಲಿ ೨.೩೩ ಎಕರೆ ಹಾಗೂ ೧೧೫/೧ ರಲ್ಲಿನ ೧.೬೯ ಎಕರೆ ವಿಸ್ತೀರ್ಣದ ಪೈಕಿ ೧೯ ನಿವೇಶನ ಗಳನ್ನು ಕೆಲವು ಸಂಘ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಖರೀದಿಸಿದ್ದಾರೆ. ಆದರೆ ಇದು ಬಡಾವಣೆಯ ಬಗ್ಗೆ ಮಾಹಿತಿ ನೀಡಿ ನಿವೇಶನ ಖರೀದಿಸಿರುವ ಜನರಿಗೆ ಯಾವುದೇ ತೊಂದರೆಯಾಗದAತೆ ಮಾಡಬೇಕಿದೆ. ಈ ಬಗ್ಗೆ ಬಡಾವಣೆಯ ಮಾಲೀಕರು ಸರ್ಕಾರದ ನಿಯಮ ಪಾಲನೆಗೆ ಮುಂದಾಗಬೇಕಿದೆ ಎಂದರು.

೧೯೮೦ ರಲ್ಲಿ ಸರ್ವೆ ನಂಬರ್ ೧೪೫ ಬಿ, ಹಾಗೂ ೧೧೫/೧ ರಲ್ಲಿ ಖಾಸಗಿ ವ್ಯಕ್ತಿ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿ ಅಂದಿನ ಕುಶಾಲನಗರದ ಪುರಸಭೆ ಯಲ್ಲಿ ಪರವಾನಗಿ ಪಡೆದಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಸ್ಪತ್ರೆಗೆ ಎಂದು ಕಾಯ್ದಿರಿಸಿದ ಕಟ್ಟಿದ ಕಟ್ಟಡಗಳನ್ನು ತೆರವುಗೊಳಿಸಿ ಬಡಾವಣೆಯಾಗಿ ಪರಿವರ್ತಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ.

ಇದು ಖರೀದಿಸಿರುವವರಿಗೆ ಸಂಕಷ್ಟವಾಗುತ್ತಿದೆ. ವಾಣಿಜ್ಯ ಹಾಗೂ ವಸತಿ ಉದ್ದೇಶಗಳಿಗೆ ಬಡಾವಣೆ ಮಾಡುವಾಗ ಶೇ.೪೫ ರಷ್ಟು ಜಾಗವನ್ನು ಬಿಡಬೇಕಿದ್ದರೂ ಬಿಡದೇ ಬಡಾವಣೆ ಮಾಡಿರುವುದರಿಂದ ಇದು ಅನಧಿಕೃತ ಬಡಾವಣೆಯಾಗಿದೆ ಎಂದರು.

ಕೊನೆಗೆ ಸುದೀರ್ಘ ಚರ್ಚೆಗಳು ನಡೆದವಾದರೂ ಕೂಡ ಯಾವುದೇ ತೀರ್ಮಾನಕ್ಕೆ ಬರದಿದ್ದಾಗ, ಸಭಾಧ್ಯಕ್ಷ ಜಯವರ್ಧನ ಇದೇ ಅನಧಿಕೃತ ಬಡಾವಣೆಗಳ ಸಾಧಕ ಬಾಧಕಗಳ ಕುರಿತು ಪ್ರತ್ಯೇಕ ಚರ್ಚೆ ನಡೆಸುವ ಬಗ್ಗೆ ಹೇಳಿದಾಗ ವಿಷಯ ತಾತ್ಕಾಲಿಕವಾಗಿ ಸಮಾಪ್ತಿಗೊಂಡಿತು.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯು ಬಹುತೇಕ ಕುಶಾಲನಗರ ಪಟ್ಟಣಕ್ಕೆ ವಿಲೀನಗೊಂಡಿರುವುದರಿAದ ನಮ್ಮ ವ್ಯಾಪ್ತಿಯನ್ನು ಗೊತ್ತುಪಡಿಸಬೇಕು. ಹಾಗೆಯೇ ಪಟ್ಟಣ ಪಂಚಾಯಿತಿಗೆ ಪಾವತಿಯಾಗಬೇಕಾದ ವಿವಿಧ ಕಂದಾಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಲು ಮನೆ ಮನೆಗಳಿಗೆ ತೆರಳುವ ಯೋಜನೆ ಆರಂಭಿಸಿ ಎಂದು ಎಂದು ಸದಸ್ಯ ತಿಮ್ಮಪ್ಪ ಮುಖ್ಯಾಧಿಕಾರಿಯಲ್ಲಿ ಕೇಳಿ ಕೊಂಡರು.

ಪAಚಾಯಿತಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಮೂರು ಕಡೆ ಕ್ಯಾಂಪ್ ಮಾಡಿ ತೆರಿಗೆ ಸಂಗ್ರಹಿಸಲಾಗಿದೆ. ಇದನ್ನು ಮತ್ತಷ್ಟು ಸಂಖ್ಯೆಯಲ್ಲಿ ಹೆಚ್ಚಿಸಿ ತೆರಿಗೆ ಸಂಗ್ರಹಿಸುವುದಾಗಿ ಸಭಾಧ್ಯಕ್ಷ ಜಯವರ್ಧನ ಹೇಳಿದರು.

ಪಂಚಾಯಿತಿ ವ್ಯಾಪ್ತಿಯ ವಿವಿಧ ಅಕ್ರಮ ಬಡಾವಣೆಗಳಲ್ಲಿನ ನಿವೇಶನಗಳನ್ನು ಉಪನೋಂದ ಣಾಧಿಕಾರಿಗಳ ಕಚೇರಿಯಲ್ಲಿ ಅಕ್ರಮವಾಗಿ ಮಾಡಿಕೊಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಇದಕ್ಕೆ ಪಂಚಾಯಿತಿ ಜವಾಬ್ದಾರಿಯಲ್ಲ ಎಂದು ಮುಖ್ಯಾಧಿಕಾರಿಗಳು ಹೇಳಿದರು.

ಪೊಲೀಸರಿಗೆ ಮಾಹಿತಿ :

ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಸಭೆಯಲ್ಲಿ ಭಾಗಿಯಾದ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಪಟ್ಟಣ ಠಾಣಾಧಿಕಾರಿ ಅಪ್ಪಾಜಿ ಅವರು ಸುಗಮ ಸಂಚಾರ ವ್ಯವಸ್ಥೆಯ ಬಗ್ಗೆ ಚುನಾಯಿತರಿಂದ ಅಗತ್ಯ ಮಾಹಿತಿ ಪಡೆದುಕೊಂಡರು.

ಖಾಸಗಿ ಬಸ್ ನಿಲ್ದಾಣವನ್ನು ಕೋಟ್ಯಂತರ ರೂಗಳನ್ನು ವ್ಯಯಿಸಿ ನಿರ್ಮಾಣ ಮಾಡಿದ್ದರೂ ಕೂಡ ಖಾಸಗಿ ಬಸ್‌ಗಳು ರಾಷ್ಟಿçÃಯ ಹೆದ್ದಾರಿಯ ಅಂಚಿನಲ್ಲಿಯೇ ನಿಲುಗಡೆಯಾಗುತ್ತಿವೆ.

ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಸಭಾಧ್ಯಕ್ಷ ಜಯವರ್ಧನ ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.

-ಕೆ.ಎಸ್. ಮೂರ್ತಿ