ಕಡAಗ, ಮಾ. ೮: ಕೆಪಿಎಲ್ ಫುಟ್ಬಾಲ್ ಕ್ರೀಡಾಕೂಟದ ಚಾಂಪಿಯನ್ ತಂಡವಾಗಿ ಸೆವೆನ್ ಶೂಟರ್ ತಂಡವು ಹೊರಹೊಮ್ಮಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ನೆಲ್ಲಚಂಡ ಕಿರಣ್ ಕಾರ್ಯಪ್ಪ ನೆರವೇರಿಸಿ, ಕ್ರೀಡೆಯಿಂದ ಸೌಹಾರ್ದತೆ ಕಾಣಬಹುದೆಂದು ಹೇಳಿದರು.

ಸರಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಿದ್ದಂಡ ರಾಜ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೆವೆನ್ ಸ್ಟಾರ್ ತಂಡವು ಗೋಲ್ಡನ್ ಸ್ಟಾರ್ ತಂಡವನ್ನು ಮಣಿಸಿ ಫೈನಲ್ ತಲುಪಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಲೈನ್ಸ್ ತಂಡವು ಡೆಕ್ಕನ್ ತಂಡವನ್ನು ಮಣಿಸಿ ಫೈನಲಿಗೆ ಪ್ರವೇಶಿಸಿತು.

ಕ್ರೀಡಾಕೂಟದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಅಧ್, ಉದಯೋನ್ಮುಖ ಆಟಗಾರ ಯುನೈಸ್, ಉತ್ತಮ ಗೋಲ್‌ಕೀಪರ್ ಮುಚ್ಚು, ಪಂದ್ಯ ಶ್ರೇಷ್ಠ ಪ್ರಶಸ್ತಿ ನಿಜಾಮ್, ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ನೌಶಾದ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಕೆಪಿಎಲ್ ೪ನೇ ಆವೃತ್ತಿಯ ಅಧ್ಯಕ್ಷ ಲತೀಫ್ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ ಅಗಲಿದ ಭಾರತೀಯ ಯೋಧ ಕೊಡಗಿನ ಅಲ್ತಾಫ್ ಅಹಮದ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಖ್ಯ ಅತಿಥಿಗಳಾಗಿ ಸೈನಿಕ ಸಲಾಂ, ಪ್ರಕಾಶ್, ಜುನೈದ್, ಸುಬೀರ್ ಸಿ.ಇ., ರಾಣಿ ಗಣಪತಿ, ರಿಯಾಜ್, ಆಸ್ಕರ್, ಪ್ರಕಾಶ್, ಅಂದುAಜಿ, ಸುಬೀರ್, ಕರೀಂ ಲಿಮ್ರಾ ಮುಸ್ತಫ, ರಾಜಾ ಸರ್, ಜುನೈದ್ ಕೆಎಂ, ಅಬೂಬಕ್ಕರ್ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಸ್ವಾಗತ ಹಾಗೂ ವಂದನಾರ್ಪಣೆಯನ್ನು ರಾಸಿದ್ ಮತ್ತು ಸಮೀರ್ ನೆರವೇರಿಸಿದರು.