ಕುಶಾಲನಗರ, ಮಾ. ೮: ಕುಶಾಲನಗರ ಹಾರಂಗಿ ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಅಕ್ರಮವಾಗಿ ಬೆಟ್ಟವನ್ನು ಕೊರೆದು ಭಾರೀ ಪ್ರಮಾಣದ ಕಲ್ಲು-ಮಣ್ಣು ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯ ರಾಜಕೀಯ ಪ್ರಮುಖರೊಬ್ಬರು ಹಿಟಾಚಿ ಮತ್ತಿತರ ತಂತ್ರಜ್ಞಾನ ಬಳಸಿ ಬೆಟ್ಟವನ್ನು ಕೊರೆದು ಮಣ್ಣು ಸಾಗಿಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಸಂಬAಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಂದಾಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಇದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ಬೃಹತ್ ಗಾತ್ರದ ಬಂಡೆಗಳನ್ನು ಕಂಪ್ರೆಸರ್ ಬಳಸಿ ಒಡೆದು ಹಾಕುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ತಕ್ಷಣ ಸಂಬAಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.