ಮಡಿಕೇರಿ, ಮಾ. ೮: ಕೊಡಗು ಜಿಲ್ಲೆಗೆ ರಾಜ್ಯದ ಅರಣ್ಯ ಸಚಿವರು ಭೇಟಿ ನೀಡಿ ವನ್ಯ ಪ್ರಾಣಿ ಸಂಘರ್ಷ ಸೇರಿದಂತೆ ಅರಣ್ಯ ಇಲಾಖೆಗೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಸಮಾಲೋಚಿಸಲು ಮುಂದಾಗದಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ನಿನ್ನೆ ವಿಧಾನ ಪರಿಷತ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಮೇಲ್ಮನೆಯಲ್ಲಿ ವಿಷಯ ಪ್ರಸ್ತಾಪಿಸಿದ ವೀಣಾ ಅವರು, ಕೆಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದÀÄ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡದಿರುವ ಬಗ್ಗೆ ನೇರವಾಗಿ ಅರಣ್ಯ ಸಚಿವರು, ಸಭಾಪತಿಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಗೆ ಯಾತಕ್ಕಾಗಿ ಬರುತ್ತಿಲ್ಲ ಎಂದು ಅವರು ಖಾರವಾಗಿಯೇ ಪ್ರಶ್ನಿಸಿದರಲ್ಲದೆ, ಕೊಡಗಿಗೆ ಬರಲೇಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಸಭಾಪತಿಗಳೂ ಈ ಬಗ್ಗೆ ಪ್ರಶ್ನಿಸಿದರು. ನಂತರ ಪ್ರತಿಕ್ರಿಯಿಸಿದ ಸಚಿವ ಉಮೇಶ್ ಕತ್ತಿ ಅವರು ಏಪ್ರಿಲ್ ಮೊದಲ
(ಮೊದಲ ಪುಟದಿಂದ) ವಾರದಲ್ಲಿ ಕೊಡಗಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳನ್ನು ಒಳಗೊಂಡAತೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಈ ಬಾರಿಯೂ ಸಚಿವರು ಭೇಟಿ ನೀಡದಿದ್ದರೆ ಮುಂದೆ ಧರಣಿ ಕೂರುವುದಾಗಿಯೂ ಈ ಸಂದರ್ಭ ವೀಣಾ ಹೇಳಿದರು.
ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಚೀನಿಹಡ್ಲು ಗಿರಿಜನ ಹಾಡಿಯ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸ್ಥಳೀಯರಿಂದ ಪ್ರತಿಭಟನೆ ಎದುರಾಗುತ್ತಿರುವ ವಿಚಾರದ ಕುರಿತು ಪ್ರಶ್ನೆಯ ಸಂದರ್ಭ ಈ ಚರ್ಚೆ ನಡೆಯಿತು.