ಮಡಿಕೇರಿ, ಮಾ. ೮: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಕಾಫಿ ಮಾರಾಟ ಮಾಡುವ ಸಂದರ್ಭದಲ್ಲಿ ತೂಕದಲ್ಲಿ ಮೋಸ ಹೋಗುತ್ತಿರುವ ಬಗ್ಗೆ ಮೌಖಿಕ ದೂರು ಸ್ವೀಕರಿಸಿದ ಹಿನ್ನೆಲೆ ತಾ. ೩ ರಿಂದ ವಿಶೇಷ ತಪಾಸಣೆ ಕಾರ್ಯ ಹಮ್ಮಿಕೊಂಡು ೩೦ ಕಡೆ ತಪಾಸಣೆ ನಡೆಸಿ ೯ ಪ್ರಕರಣಗಳನ್ನು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಮಾಪನಶಾಸ್ತç (ತೂಕ ಅಳತೆ) ಕಾಯ್ದೆಗಳ ಪ್ರಕಾರ ಕ್ರಮ ಜರುಗಿಸಲಾಗಿದೆ.
ಜಿಲ್ಲಾಧಿಕಾರಿ ಸತೀಶ ಬಿ.ಸಿ. ಅವರ ಆದೇಶದ ಮೇರೆಗೆ ಸಹಾಯಕ ನಿಯಂತ್ರಕರಾದ ಲಿಂಗರಾಜು ಅವರ ಮೇಲ್ವಿಚಾರಣೆಯಲ್ಲಿ ನಿರೀಕ್ಷಕರಾದ ವಿ.ಟಿ. ಜಗದೀಶ್ ಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ಮಾಡಿರುವುದಾಗಿ ತಿಳಿದು ಬಂದಿದೆ.
ಗೋಣಿಕೊಪ್ಪಲುವಿನಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಹಿರತಕ್ಷಣಾ ಸಮಿತಿ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ತೀರ್ಮಾನಿಸಲಾಗಿತ್ತು. ಕಾಫಿ ಬೆಳೆಗಾರರಿಗೆ ವರ್ತಕರಿಂದ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಬೆಳೆಗಾರರು ಕೂಡ ಈ ಕುರಿತು ಪುಕಾರು ಸಲ್ಲಿಸಿದ್ದರು.
(ಮೊದಲ ಪುಟದಿಂದ) ಕಾಫಿ ಬೆಳೆಗಾರರು ಹಾಗೂ ಇತರ ಗ್ರಾಹಕರು, ತೂಕ ಅಳತೆಗೆ ಸಂಬAಧಿಸಿದAತೆ ದೂರುಗಳೇನಾದರೂ ಇದ್ದಲ್ಲಿ, ಕಾನೂನು ಮಾಪನಶಾಸ್ತç ನಿರೀಕ್ಷಕರು (ಮೊಬೈಲ್ ಸಂ. ೯೧೬೪೫೩೫೩೪೨) ಇವರನ್ನು ಸಂಪರ್ಕಿಸಬಹುದು.
ಎಲ್ಲಾ ಕಾಫಿ ಬೆಳೆಗಾರರು ತಮ್ಮಲ್ಲಿರುವ ತೂಕದ ಯಂತ್ರಗಳನ್ನು ಇಲಾಖೆಯಿಂದ ಸತ್ಯಾಪನೆಗೊಳಪಡಿಸಿಕೊಂಡು ಇಲಾಖಾ ಪ್ರಮಾಣಪತ್ರವನ್ನು ಪಡೆದು ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು ಬೆಳೆಗಾರರ ಹಿತದೃಷ್ಟಿಯಿಂದ ಸಮಂಜಸವಾಗಿದೆ. ಕಾಫಿ ಖರೀದಿದಾರರು ಮತ್ತು ವರ್ತಕರು ಉಪಯೋಗಿಸುತ್ತಿರುವ ತೂಕದ ಸಾಧನಗಳನ್ನು ಇಲಾಖೆಯಿಂದ ಮುದ್ರೆ ಮಾಡಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಂಡು ತೂಕದ ನಿಖರತೆಯನ್ನು ಖಚಿತಪಡಿಸಿಕೊಂಡು ಕಾಫಿ ಮಾರಾಟದ ವ್ಯವಹಾರ ನಡೆಸಲು ಕಾಫಿ ಬೆಳೆಗಾರರಲ್ಲಿ ಮನವಿ ಮಾಡಿದೆ ಎಂದು ಕಾನೂನು ಮಾಪನಶಾಸ್ತç ಸಹಾಯಕ ನಿಯಂತ್ರಕ ಡಿ.ಆರ್. ಲಿಂಗರಾಜು ತಿಳಿಸಿದ್ದಾರೆ.