ಕಣಿವೆ, ಮಾ. ೭: ಶ್ವಾನ ವೊಂದನ್ನು ಆಸರೆಯಾಗಿಸಿ, ರಸ್ತೆ ಬದಿಯ ಅಂಗಡಿ ಬದಿಯನ್ನು ಆಶ್ರಯಿಸಿಕೊಂಡು ಅನೇಕ ವರ್ಷ ಗಳಿಂದ ಜೀವಿಸುತ್ತಿರುವ ಮಹಿಳೆ ಯೊಬ್ಬರು ರಸ್ತೆ ಹೋಕರ ಗಮನ ಸೆಳೆಯುವ ಪ್ರಸಂಗ ಕುಶಾಲನಗರದ ಆಸ್ಪತ್ರೆ ರಸ್ತೆಯೊಂದರ ಮಳಿಗೆ ಯೊಂದರ ಬಳಿ ಕಂಡು ಬರುವ ಸಾಮಾನ್ಯ ಚಿತ್ರಣವಾಗಿದೆ. ಕುಟುಂಬ ಸದಸ್ಯರಿಂದ ಹೊರಗುಳಿದು ಅನೇಕ ವರ್ಷಗಳಿಂದ ಏಕಾಂಗಿಯಾಗಿ ಬದುಕು ನಡೆಸುತ್ತಿರುವ ಈ ಮಹಿಳೆಗೆ ಸ್ಥಳೀಯ ಪಂಚಾಯಿತಿ ಸೂಕ್ತ ಆಶ್ರಯ ಕಲ್ಪಿಸುವಲ್ಲಿ ಮುಂದಾಗ ಬೇಕಿದೆ.

ಇಡೀ ವಿಶ್ವ ಮಾರ್ಚ್ ೮ ರಂದು ಮಹಿಳಾ ದಿನಾಚರಣೆ ಆಚರಿಸುತ್ತಿ ರುವ ಈ ಹೊತ್ತಿನಲ್ಲಿ ಅಬಲೆಯಾಗಿ ರುವ ಮಹಿಳೆಯರನ್ನು ಸಬಲರ ನ್ನಾಗಿಸುವುದು ಸ್ಥಳೀಯ ಪಂಚಾಯಿತಿ ಅಥವಾ ಮಹಿಳಾ ಕಲ್ಯಾಣ ಇಲಾಖೆಯ ಆದ್ಯ ಕರ್ತವ್ಯ ವಾಗಬೇಕಿದೆ. ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಬಳಿ ಇರುವ ಖಾಸಗಿ ವಾಣಿಜ್ಯ ಮಳಿಗೆಯೊಂದರ ಸ್ಥಳೀಯ ಪಂಚಾಯಿತಿ ಸೂಕ್ತ ಆಶ್ರಯ ಕಲ್ಪಿಸುವಲ್ಲಿ ಮುಂದಾಗ ಬೇಕಿದೆ.

ಇಡೀ ವಿಶ್ವ ಮಾರ್ಚ್ ೮ ರಂದು ಮಹಿಳಾ ದಿನಾಚರಣೆ ಆಚರಿಸುತ್ತಿ ರುವ ಈ ಹೊತ್ತಿನಲ್ಲಿ ಅಬಲೆಯಾಗಿ ರುವ ಮಹಿಳೆಯರನ್ನು ಸಬಲರ ನ್ನಾಗಿಸುವುದು ಸ್ಥಳೀಯ ಪಂಚಾಯಿತಿ ಅಥವಾ ಮಹಿಳಾ ಕಲ್ಯಾಣ ಇಲಾಖೆಯ ಆದ್ಯ ಕರ್ತವ್ಯ ವಾಗಬೇಕಿದೆ. ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಬಳಿ ಇರುವ ಖಾಸಗಿ ವಾಣಿಜ್ಯ ಮಳಿಗೆಯೊಂದರ ಗುಡಿಸಿ ಸ್ವಚ್ಛ ಗೊಳಿಸುವುದಲ್ಲದೇ ತನಗೆ ಗೋಚರಿಸಿದ ಕೆಲವೊಬ್ಬರ ಮನೆಯಂಗಳಗಳನ್ನು ಗುಡಿಸಿ ನೀರು ಹಾಕಿ ಸ್ವಚ್ಛಗೊಳಿಸುತ್ತಾರೆ.

ಕಳೆದ ೧೫ ವರ್ಷಗಳ ಹಿಂದೆ ಸ್ಥಳೀಯ ಪಂಚಾಯಿತಿ ವತಿಯಿಂದ ನಿರ್ಗತಿಕ ಮಹಿಳೆಯೆಂದು ಬಾವಿಸಿ ಮೈಸೂರು ಜಿಲ್ಲೆಯ ಕೊಳ್ಳೇಗಾಲದ ಬಳಿ ಇರುವ ಅಬಲೆಯರ ಹಿತರಕ್ಷಣಾ ಕೇಂದ್ರಕ್ಕೆ ರವಾನಿಸ ಲಾಗಿತ್ತು. ಆದರೆ ಅಲ್ಲಿ ಇರಲಾಗದೇ ಮತ್ತೆ ಮರಳಿ ಕುಶಾಲನಗರಕ್ಕೆ ಬಂದ ಈ ಮಹಿಳೆ ಅಂದಿನಿAದಲೂ ಅಲ್ಲಲ್ಲಿಗೆ ತನ್ನ ಹಾಸಿಗೆ ಹೊದಿಕೆ ಬದಲಿಸುತ್ತಾ ಪಟ್ಟಣದ ರಸ್ತೆ ಬದಿಯಲ್ಲೇ ಬದುಕುತ್ತಿದ್ದಾರೆ.

ಹೀಗಿರುವಾಗ ಪಂಚಾಯಿತಿ ಆಡಳಿತ ಮಂದಿ, ಮಾನವೀಯ ನೆಲೆಗಟ್ಟಿನಲ್ಲಿ ಈ ಮಹಿಳೆಗೆ ಎಲ್ಲಿಯಾ ದರೂ ಒಂದು ಸಣ್ಣ ಸೂರು ಕಲ್ಪಿಸಿಕೊಡುವಲ್ಲಿ ಮುಂದಾಗಬೇಕಿದೆ.

ಆರೋಗ್ಯವAತಳಾಗಿರುವ ಈ ಮಹಿಳೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಒಂದಷ್ಟು ಕೌನ್ಸಿಲಿಂಗ್ ಮಾಡುವ ಮೂಲಕ ಸಾಮಾನ್ಯ ಜನರಂತೆ ಬದುಕು ನಡೆಸಲು ಪ್ರೇರೇಪಿಸುವ ಕೆಲಸ ಆಗಬೇಕಿದೆ.

ಮಹಿಳಾ ಸಂಘಟನೆಗಳು ಇಂತಹ ಅಬಲೆಯರ ರಕ್ಷಣೆಗೆ ಹಾಗೂ ಸುರಕ್ಷಿತ ಜೀವನ ಕ್ರಮಕ್ಕೆ ತಿಳಿ ಹೇಳುವ ಕೆಲಸ ಮಾಡುವ ಮೂಲಕ ತಮ್ಮ ಬದ್ಧತೆ ತೋರ ಬೇಕಿದೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಈ ಮಹಿಳೆ, ನನ್ನ ಹೆಸರು ಜಯ. ನನಗೆ ಒಬ್ಬಳು ಮಗಳು ಹಾಗು ಒಬ್ಬ ಮಗ ಇದ್ದಾರೆ. ನನ್ನದು ಹುಣಸೂರು ಬಳಿಯ ಮಂಟಿಕೊಪ್ಪಲು, ಗಂಡನ ಊರು ಪಿರಿಯಾಪಟ್ಟಣದ ಬೆಳತ್ತೂರು ಎಂದು ಹೇಳುತ್ತಾರೆ. ಹಾಗಾಗಿ ಸ್ಥಳೀಯ ಪಂಚಾಯಿತಿ ಅಥವಾ ಮಹಿಳಾ ಸಂಘಟನೆಗಳು ಈ ಬಗ್ಗೆ ವಿಚಾರಿಸಿ ಕುಟುಂಬ ಸದಸ್ಯರ ಜೊತೆ ಸೇರಿಸುವ ಕೆಲಸವಾದರೆ ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರುತ್ತದೆ.

-ಕೆ. ಎಸ್. ಮೂರ್ತಿ, ಕುಶಾಲನಗರ.