ಮಡಿಕೇರಿ ಮಾ. ೭: ಮನಸ್ಸು ಮತ್ತು ಶರೀರ ಸಕ್ರಿಯವಾದಾಗ ಮಾತ್ರ ಏಕಾಂಗಿತನಕ್ಕೆ ಮುಕ್ತಿ ಸಿಗಲು ಸಾಧ್ಯವೆಂದು ಫೀ.ಮಾ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಮಂಡೇಪAಡ ಡಾ.ಪುಷ್ಪಾಕುಟ್ಟಣ್ಣ ಅಭಿಪ್ರಾಯ ಪಟ್ಟಿದ್ದಾರೆ.
ಕೊಡವ ಮಕ್ಕಡ ಕೂಟ ಹೊರ ತಂದಿರುವ ಲೇಖಕ ಕಾಯಪಂಡ ಸಿ.ದೇವಯ್ಯ ಅವರ ೩ನೇ ಪುಸ್ತಕ “ಲೋನ್ಲಿ ಡೇಸ್” ನ್ನು ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಏಕಾಂಗಿತನ ಕಾಡುವುದು ಸಹಜ, ಆದರೆ ಏಕಾಂಗಿತನವನ್ನು ಮೀರಿ ಬದುಕು ಸಾಗಿಸುವ ಛಲ ನಮ್ಮಲ್ಲಿರಬೇಕು. ಮನಸ್ಸನ್ನು ಏಕಾಂಗಿಯಾಗಿರಲು ಬಿಡದೆ ಹೊಸ ಚಿಂತನೆಗಳೊAದಿಗೆ ಹೊರ ಜಗತ್ತಿನಲ್ಲಿ ತೊಡಗಿಸಿಕೊಂಡು ಸಕ್ರಿಯಗೊಳಿಸುವುದರಿಂದ ಇದು ಸಾಧ್ಯವೆಂದರು.
ಎಲ್ಲರಿಗೂ ಭಾವನೆಗಳಿಗೆ ಅಕ್ಷರದ ರೂಪ ನೀಡಲು ಸಾಧ್ಯವಿಲ್ಲ, ದೇವಯ್ಯ ಅವರು “ಲೋನ್ಲಿ ಡೇಸ್” ಮೂಲಕ ತಮ್ಮ ಅನುಭವಗಳನ್ನು ಸುಂದರವಾಗಿ ಹಂಚಿಕೊAಡಿದ್ದಾರೆ. ಹೊಸ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕೊಡವ ಮಕ್ಕಡ ಕೂಟದ ಕಾರ್ಯ ಶ್ಲಾಘನೀಯ ವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಬಾಚರಣಿ ಯಂಡ ಅಪ್ಪಣ್ಣ ಮಾತನಾಡಿ ಕೊಡಗಿನಲ್ಲಿ ಸಾಹಿತ್ಯ ಕ್ರಾಂತಿಯಾಗ ಬೇಕು, ಸಾಹಿತ್ಯ ಲೋಕ ಮತ್ತು ಸಾಹಿತಿಗಳು ವೃದ್ಧಿಯಾಗಬೇಕೆಂದು ಹಾರೈಸಿದರು.
ಹೆಣ್ಣಿನ ಮನಸ್ಸಿನಂತೆ ಪ್ರಕೃತಿಯ ಲೀಲೆಯೂ ವಿಭಿನ್ನ ಮತ್ತು ಅದ್ಭುತವಾಗಿದ್ದು, ಸಾಹಿತಿ ಇದನ್ನು ವರ್ಣಿಸುವ ರೀತಿಯೇ ರೋಮಾಂಚಕ. ಈ ಕಾರ್ಯವನ್ನು ಲೇಖಕ ದೇವಯ್ಯ ಮಾಡಿದ್ದಾರೆ ಎಂದರು.
ಲೇಖಕ ಕಾಯಪಂಡ ಸಿ. ದೇವಯ್ಯ ಮಾತನಾಡಿ ವಿವಿಧ ವಿಚಾರಗಳ ಬಗ್ಗೆ ಉತ್ತಮ ಹವ್ಯಾಸ ಗಳನ್ನು ಬೆಳೆಸಿಕೊಂಡಾಗ ನಿರಾಶೆಯ ಮನೋಭಾವ ಅಥವಾ ಏಕಾಂಗಿತನ ಕಾಡುವುದಿಲ್ಲವೆಂದು ಅಭಿಪ್ರಾಯ ಪಟ್ಟರು.
ಮುಂದಿನ ಪೀಳಿಗೆ ಓದುವ ಮತ್ತು ಬರೆಯುವ ಹವ್ಯಾಸ ರೂಢಿಸಿಕೊಂಡು ಸಕ್ರಿಯರಾಗುವ ಮೂಲಕ ಜೀವನೋತ್ಸಾಹವನ್ನು ಕಂಡುಕೊಳ್ಳಬೇಕೆAದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ತಮ್ಮ ಜೀವನದ ಅನುಭವ ಕಥನಗಳನ್ನು ಪುಸ್ತಕದ ರೂಪದಲ್ಲಿ ಹೊರತರುವು ದಾಗಿ ದೇವಯ್ಯ ತಿಳಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಎಲ್ಲಾ ಭಾಷೆಗಳ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿರುವ ಕೂಟ ೫೩ ನೇ ಪುಸ್ತಕವಾಗಿ “ಲೋನ್ಲಿ ಡೇಸ್” ನ್ನು ಹೊರ ತಂದಿದೆ ಎಂದರು.
ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮಂಡೇಪAಡ ಕುಟ್ಟಣ್ಣ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷೆ ಹಾಗೂ ಸಾಹಿತಿ ರಾಣು ಅಪ್ಪಣ್ಣ ಉಪಸ್ಥಿತರಿದ್ದರು.