ಮಡಿಕೇರಿ, ಮಾ. ೮: ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಗೋಣಿಕೊಪ್ಪ ನಿವಾಸಿ, ಪ್ರಸ್ತುತ ಖತಾರ್‌ನಲ್ಲಿ ನೆಲೆಸಿರುವ ಬಲ್ಲಡಿಚಂಡ ಸಂಪತ್ - ಸೋನಾ ದಂಪತಿಯ ಪುತ್ರಿ ಶೀತಲ್ ಅವರು ಜಿಲ್ಲೆಗೆ ಆಗಮಿಸಿದ್ದಾರೆ. ಉಕ್ರೇನಿನ ಪೂರ್ವ ಭಾಗದಲ್ಲಿನ ಖಾರ್ಕಿವ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರು, ಇತರ ಭಾರತೀಯ ವಿದ್ಯಾರ್ಥಿಗಳೊಂದಿಗೆ ರೈಲಿನ ಮೂಲಕ ೧,೧೦೦ ಕಿ.ಮೀ ಪಯಣದ ಬಳಿಕ ಲೆವಿವ್ ತಲುಪಿ, ಅಲ್ಲಿಂದ ಪೋಲ್ಯಾಂಡ್ ದೇಶಕ್ಕೆ ಬಸ್ ಮೂಲಕ ತಲುಪಿದ್ದರು. ಪೋಲ್ಯಾಂಡ್‌ನಲ್ಲಿ ‘ಇಮಿಗ್ರೇಷನ್’ ಸಂಬAಧ ಸ್ವಲ್ಪ

ಜಿಲ್ಲೆಗೆ ಮರಳಿದ ಶೀತಲ್

(ಮೊದಲ ಪುಟದಿಂದ) ತಡವಾಗಿದ್ದು, ೬ ಗಂಟೆಗಳ ಕಾಲ -೨ ಡಿಗ್ರಿ ಸೆಲ್‌ಶಿಯಸ್ ಅತ್ಯಂತ ಛಳಿಯ ತಾಪಮಾನದಲ್ಲಿ ಕಾದು ಕುಳಿತ ಬಗ್ಗೆ ತಮ್ಮ ಅನುಭವ ಹಂಚಿಕೊAಡಿದ್ದರು. ವಿಮಾನ ದೊರಕುವ ತನಕ ಪೋಲ್ಯಾಂಡ್‌ನಲ್ಲಿನ ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.