ಮಡಿಕೇರಿ, ಮಾ. ೭: ಐಕಾನಿಕ್ ಬ್ರದರ್ಸ್ಸ್ ಕಾಂತೂರು ಇವರ ವತಿಯಿಂದ ಕಳೆದ ಎರಡು ದಿನಗಳಿಂದ ಕಾಂತೂರಿನ ಉಳುವಾರನ ಆಟದ ಮೈದಾನದಲ್ಲಿ ನಡೆದ ಪ್ರಥಮ ವರ್ಷದ ಕೊಡಗು ಗೌಡ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಬಾಳುಗೋಡು ‘ಎ’ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಬ್ಲಾö್ಯಕ್ ಪ್ಯಾಂಥರ್ಸ್ ತಂಡ ರನ್ನರ್ಸ್ಸ್ ಬಹುಮಾನ ಪಡೆದುಕೊಂಡರೆ, ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜ ‘ಬಿ’ ತಂಡ ಮೂರನೇ ಬಹುಮಾನ ಪಡೆದುಕೊಂಡಿದೆ. ಸರಣಿ ಪುರುಷೋತ್ತಮ ತಳೂರು ವಿಕ್ಕಿ, ಅತ್ಯುತ್ತಮ ಹೊಡೆತಗಾರ ಗೌತಮ್ ಬಾಳುಗೋಡು ಹಾಗೂ ಬೆಸ್ಟ್ ಡಿಫೆಂಡರ್ ಬಹುಮಾನವನ್ನು ಬಾಳುಗೋಡಿನ ಕಾರ್ತಿಕ್ ಪಡೆದುಕೊಂಡರು.