ಮಡಿಕೇರಿ, ಮಾ. ೭: ಕೊಡಗು ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಹಾಗೂ ಜೋಡುಪಾಲ ಗೆಳೆಯರ ಬಳಗದ ವತಿಯಿಂದ ಏ. ೨ ರಂದು ಹೊನಲು ಬೆಳಕಿನ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಬಳಗದ ಸಲಹೆಗಾರ ಅಗೊಳಿಕಜೆ ಧನಂಜಯ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಜೋಡುಪಾಲ ಸ.ಹಿ.ಪ್ರಾ. ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಸಂಜೆ ೫ ಗಂಟೆಗೆ ಆರಂಭವಾಗಲಿದೆ. ಮೊದಲು ನೋಂದಣಿ ಮಾಡಿಕೊಳ್ಳುವ ೨೦ ತಂಡಗಳಿಗೆ ಮಾತ್ರ ಆಡಲು ಅವಕಾಶವಿರುತ್ತದೆ.

ಪಂದ್ಯಾವಳಿಗೆ ಅತಿಥಿಯಾಗಿ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಭಾಗವಹಿಸಲಿದ್ದಾರೆ. ಮೊದಲ ಬಹುಮಾನ ೨೨,೨೨೨ ರೂ. ನಗದು ಟ್ರೋಫಿ, ದ್ವಿತೀಯ ಬಹುಮಾನವಾಗಿ ೧೫,೫೫೫ ರೂ. ನಗದು ಟ್ರೋಫಿ, ತೃತೀಯ ಬಹುಮಾನವಾಗಿ ೭೭೭೭ ರೂ. ನಗದು ಟ್ರೋಫಿ, ನಾಲ್ಕನೇ ಬಹುಮಾನವಾಗಿ ೫೫೫೫ ರೂ. ನಗದು ಟ್ರೋಫಿ ನೀಡಲಾಗುತ್ತದೆ. ಪಂದ್ಯಾಟಕ್ಕೆ ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ತಾ. ೨೫ ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ೮೨೭೭೧೩೨೧೪೩, ೯೭೩೧೦೦೯೮೪೧ ದೂರವಾಣಿಯನ್ನು ಸಂಪರ್ಕಿಸಬಹುದು. ಅದೇ ದಿನ ಹಗಲು ಮದೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟಗಳು ನಡೆಯಲಿವೆ ಎಂದು ಧನಂಜಯ ವಿವರಿಸಿದರು.

ಗೋಷ್ಠಿಯಲ್ಲಿ ಅಮೆಚೂರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕಪಿಲ್, ಜೋಡುಪಾಲ ಗೆಳೆಯರ ಬಳಗದ ಅಧ್ಯಕ್ಷ ಪ್ರಮೋದ್, ಸದಸ್ಯರಾದ ಸಂಜಯ್, ದಿನೇಶ್, ದೀಕ್ಷಿತ್ ಉಪಸ್ಥಿತರಿದ್ದರು.