ಕಣಿವೆ, ಮಾ. ೭: ಇದು ಕುಶಾಲನಗರದ ಹೃದಯಭಾಗ ದಲ್ಲಿರುವ ಫಾತಿಮಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸೋಮವಾರ ಬೆಂಕಿ ರಹಿತವಾಗಿ ತಯಾರಿಸಲ್ಪಟ್ಟ ಬಗೆ ಬಗೆಯ ಸಿಹಿ ತಿಂಡಿಗಳ ತಯಾರಿಕಾ ಸ್ಪರ್ಧೆಯಲ್ಲಿ ಶಿಕ್ಷಕ ವೃಂದವನ್ನು ಮಾತ್ರವಲ್ಲದೆ ನೋಡುಗರ ಬಾಯಲ್ಲಿ ನೀರೂರಿಸು ವಂತೆ ಮಾಡಿದ್ದು ವಿಶೇಷವಾಗಿತ್ತು.
ಎಂಟರಿAದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಂಕಿ ರಹಿತವಾಗಿ ಬಗೆಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವ ಸ್ಪರ್ಧೆಯಲ್ಲಿ ಸುಮಾರು ೨೦ಕ್ಕೂ ಅಧಿಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ತಂಡ ಪಾಲ್ಗೊಂಡು ತಮಗೆ ತಿಳಿದ ರುಚಿಕರವಾದ ತಿಂಡಿ ತಿನಿಸು ಮತ್ತು ಪಾನೀಯಗಳನ್ನು ತಯಾರು ಮಾಡಿದ್ದು ವಿಶೇಷವಾಗಿತ್ತು.
ಈ ಕುರಿತು ಮಾತನಾಡಿದ ಇಲ್ಲಿನ ಮುಖ್ಯ ಶಿಕ್ಷಕ ಜಫ್ರಿ ಡಿಸಿಲ್ವಾ, ಸುಮಾರು ಎರಡು ವರ್ಷಗಳಿಂದ ಕೋವಿಡ್ ೧೯ ರ ಹಿನ್ನಲೆಯಲ್ಲಿ ಶಾಲೆಗಳು ಮುಚ್ಚಿದ್ದ ಕಾರಣ ಕೆಲವು ಚಟುವಟಿಕೆಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಮಾತ್ರವಲ್ಲ ತಮ್ಮ ದೈನಂದಿನ ಚಟುವಟಿಕೆಗಳ ಲವಲವಿಕೆಯನ್ನು ಕಳೆದುಕೊಂಡಿದ್ದಾರೆ. ಇದನ್ನು ಮನಗಂಡು ನಮ್ಮ ಶಾಲಾ ಮಕ್ಕಳನ್ನು ಹುರಿದುಂಬಿಸುವ ಸಲುವಾಗಿ ವಿದ್ಯಾರ್ಥಿಗಳು ತಮ್ಮ ಕೈಯಲ್ಲೇ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಬೆಂಕಿ ರಹಿತವಾಗಿ ಬೇಕಾದಂತಹ ತಿನಿಸುಗಳನ್ನು ತಯಾರಿ ನಡೆಸಲಾಗಿದೆ. ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ಕಾಲಾವಧಿಯಲ್ಲಿ ತಮ್ಮ ಅವಶ್ಯಕತೆಗೆ ತಕ್ಕಂತೆ ತಿಂಡಿಗಳನ್ನು ತಯಾರು ಮಾಡಲು ಈ ಚಟುವಟಿಕೆಗಳು ಅವಶ್ಯಕ ವಾಗುತ್ತದೆ. ಗಂಡು-ಹೆಣ್ಣು ಭೇದವಿಲ್ಲದೆ ವಿವಿಧ ರೀತಿಯ ಆಹಾರ ತಯಾರಿಕೆಯಲ್ಲಿ ಇಂದು ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರುಚಿಗಳಲ್ಲೂ ಕೂಡ ಬಗೆಬಗೆಯ ಭಿನ್ನತೆ ಇದ್ದು ಶಿಕ್ಷಕ ವೃಂದದ ವತಿಯಿಂದ ಈ ಬೆಂಕಿ ರಹಿತ ಸಿಹಿ ತಿಂಡಿ ತಯಾರಿಕೆಗೆ ಮೌಲ್ಯಮಾಪನ ನಡೆಯಲಿದೆ ಎಂದರು. ಈ ಸಂದರ್ಭ ಶಿಕ್ಷಕರಾದ ಅನಿತಾ ಸುಪ್ರಿಯಾ, ಅಮಲ್ ರಾಜಕುಮಾರ್, ಕಮಲನಾಥನ್, ಶಿಫಾ, ಮೇರಿ ಸೇರಿದಂತೆ ಇನ್ನಿತರರಿದ್ದರು.