ಮಡಿಕೇರಿ ಮಾ.೮ : ಮೇಕೇರಿ ಮಖಾಂ ಉರೂಸ್ ತಾ. ೧೧ ರಿಂದ ೧೫ರ ವರೆಗೆ ನಡೆಯಲಿದೆ ಎಂದು ಮೇಕೇರಿ ಕಿಜ಼ರ್ ಜುಮಾ ಮಸೀದಿ ಆಡಳಿತ ಮಂಡಳಿ ತಿಳಿಸಿದೆ.

ತಾ. ೧೧ ರಂದು ಜುಮುಅ ನಮಾಜ಼್ ನಂತರ ಮೇಕೇರಿ ಜಮಾಅತ್ ಅಧ್ಯಕ್ಷ ಸಯ್ಯದ್ ಜಮ್ರುದ್ದೀನ್ ಸಾಹೆಬ್ ಧ್ವಜಾರೋಹಣ ನೆರವೇರಿಸಲಿದ್ದು, ಮಖಾಂ ಅಲಂಕಾರ ಹಾಗೂ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ.

ಎರುಮಾಡ್ ತಙಳ್ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರುಸಿ ನೇತೃತ್ವದಲ್ಲಿ ರಾತ್ರಿ ಇಶಾ ನಮಾಜ಼್ ನಂತರ ದಿಖ್ರ್ ದುಆ ಮಜ್ಲಿಸ್ ಜರುಗಲಿದ್ದು, ಮೇಕೇರಿ ಖತೀಬರಾದ ಬಹು ಅಬ್ದುಲ್ ಸಲಾಂ ಹಳ್‌ರಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ತಾ. ೧೨ ರಂದು ಇಶಾ ನಮಾಜ಼್ ನಂತರ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ನೌಫಲ್ ಸಖಾಫಿ ಕಳಸ ಉದ್ಬೋಧನೆ ಮಾಡಲಿದ್ದಾರೆ.

ತಾ. ೧೩ ರಂದು ಇಶಾ ನಮಾಜ಼್ ನಂತರ ಖಮರುದ್ದೀನ್ ಅನ್ವಾರಿ ಸಖಾಫಿ ಮತ್ತು ಸಂಗಡಿಗರು, ನಅತೇ ಶರೀಫ್, ಬಹು ಮುಹೀನುದ್ದೀನ್ ರಿಂದ ಬುರ್ಧಾ ಮಜ್ಲಿಸ್ ನಡೆಯಲಿದೆ. ತಾ. ೧೪ ರಂದು ಝಹರ್ ನಮಾಜ಼್ ನಂತರ ಮೌಲೀದ್ ಪಾರಾಯಣ, ಮಧ್ಯಾಹ್ನ ೨.೩೦ ಗಂಟೆಗೆ ಸಂದಲ್ ಮೆರವಣಿಗೆ ಮತ್ತು ಸಂಜೆ ೪ ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.