ನಾಪೋಕ್ಲು, ಮಾ. ೮: ನಾಪೋಕ್ಲು ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಮಳೆ ಸುರಿಯಿತು. ಪಟ್ಟಣದ ಸುತ್ತಮುತ್ತ ಮಳೆಯಾಗಿದೆ. ಮೊದಲ ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಒಂದೆಡೆ ಸಂತಸಗೊAಡಿದ್ದರೆ ಕಾಫಿ ಕೊಯ್ಲು ಮುಕ್ತಾಯದ ಹಂತದಲ್ಲಿರುವ ರೈತರು ಕಣದಲ್ಲಿ ಒಣಗಲು ಹಾಕಿರುವ ಕಾಫಿ ಒದ್ದೆಯಾಗಿದೆ. ಸ್ಪಿçಂಕ್ಲರ್ ಬಳಸಿ ನೀರು ಹಾಯಿಸಿರುವ ತೋಟಗಳಲ್ಲಿ ಹೂಗಳು ಅರಳುತ್ತಿವೆ. ಮೊದಲ ಮಳೆ ಹಲವರಲ್ಲಿ ಸಂತಸ ತಂದಿದೆ, ಹೂಮಳೆ ಕಾಫಿ ಇಳುವರಿಗೆ ಅತ್ಯವಶ್ಯಕವಾಗಿದ್ದು ರೈತರು ಮತ್ತಷ್ಟು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಉರಿ ಬಿಸಿಲಿನ ತಾಪದಿಂದ ಬಳಲಿದ್ದ ಜನರು ಮಳೆಯಿಂದಾಗಿ ಸಂತೋಷ ಗೊಂಡಿದ್ದಾರೆ. - ದುಗ್ಗಳ