ರೊಮೇನಿಯಾದಿಂದ ೪೧೦ ಭಾರತೀಯರ ಏರ್‌ಲಿಫ್ಟ್

ನವದೆಹಲಿ, ಮಾ. ೮: ರೊಮೇನಿಯಾದ ಸುಸೇವಾದಿಂದ ಮಂಗಳವಾರ ಎರಡು ನಾಗರಿಕ ವಿಮಾನಗಳಲ್ಲಿ ೪೧೦ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ರಷ್ಯಾದ ಸೇನಾ ದಾಳಿಯಿಂದಾಗಿ ಫೆಬ್ರವರಿ ೨೪ ರಿಂದ ಉಕ್ರೇನ್‌ನ ವಾಯುಪ್ರದೇಶವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯರು ನೆರೆಯ ದೇಶಗಳ ಗಡಿ ತಲುಪಿದ ನಂತರ ಅವರನ್ನು ಅಲ್ಲಿಂದ ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೋಲೆಂಡ್ ತಲುಪಿದ ನಂತರ ಅವರನ್ನು ವಿಮಾನದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ. ಉಕ್ರೇನ್‌ನ ನೆರೆಯ ದೇಶಗಳಿಂದ ಭಾರತೀಯ ನಾಗರಿಕರನ್ನು ರಕ್ಷಿಸಲು ಕೇಂದ್ರ ಸರ್ಕಾರ ‘ಆಪರೇಷನ್ ಗಂಗಾ' ಅಡಿಯಲ್ಲಿ ೪೧೦ ಭಾರತೀಯರನ್ನು ಇಂದು ಸುಸೇವಾದಿಂದ ೨ ವಿಶೇಷ ನಾಗರಿಕ ವಿಮಾನಗಳ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತೈಲ ಕಂಪೆನಿಗಳು ಬೆಲೆ ನಿರ್ಧರಿಸುತ್ತವೆ: ಕೇಂದ್ರ ಸಚಿವ

ನವದೆಹಲಿ, ಮಾ. ೮: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ತಾ. ೧೦ ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಆದರೆ ಚುನಾವಣಾ ಫಲಿತಾಂಶಕ್ಕಿAತ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಹೆಚ್ಚಳವಾಗಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಇಷ್ಟು ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಡೆ ಹಿಡಿದಿದ್ದ ಕೇಂದ್ರ ಸರ್ಕಾರ ಈಗ ಚುನಾವಣಾ ಫಲಿತಾಂಶದ ನಂತರ ತೈಲ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ತೈಲ ಕಂಪೆನಿಗಳು ಇಂಧನ ಬೆಲೆಗಳನ್ನು ನಿರ್ಧರಿಸುತ್ತವೆ. ಆದರೆ ದೇಶದಲ್ಲಿ ಕಚ್ಚಾ ತೈಲದ ಕೊರತೆಯಿಲ್ಲ ಎಂದು ಹೇಳಿದ್ದಾರೆ. ನಮ್ಮ ಅಗತ್ಯತೆಗಳಲ್ಲಿ ಶೇ. ೮೫ ರಷ್ಟು ಕಚ್ಚಾ ತೈಲದ ಆಮದು ಮತ್ತು ಶೇ. ೫೦-೫೫ ರಷ್ಟು ಅನಿಲದ ಮೇಲೆ ಅವಲಂಬಿತವಾಗಿದ್ದರೂ ಸಹ, ನಮ್ಮ ತೈಲ ಅವಶ್ಯಕತೆಗಳನ್ನು ಪೂರೈಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಪುರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ತೈಲ ಬೆಲೆಗಳನ್ನು ಜಾಗತಿಕ ಬೆಲೆಗಳಿಂದ ನಿರ್ಧರಿಸಲಾಗುತ್ತದೆ ಮತ್ತು ಪ್ರಪಂಚದ ಒಂದು ಭಾಗದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ಅದರ ಪರಿಣಾಮ ತೈಲ ಕಂಪೆನಿಗಳ ಮೇಲೂ ಬೀರುತ್ತದೆ. ತೈಲ ಕಂಪೆನಿಗಳು ಸ್ವತಃ ಬೆಲೆಗಳನ್ನು ನಿರ್ಧರಿಸುತ್ತವೆ. ನಾವು ಜನರ ಹಿತದೃಷ್ಟಿಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಪುರಿ ಹೇಳಿದ್ದಾರೆ.

ಅಂರ‍್ರಾಷ್ಟಿçÃಯ ವಿಮಾನಗಳ ಹಾರಾಟ ಪುನರಾರಂಭಿಸಲು ಡಿಜಿಸಿಎ ನಿರ್ಧಾರ

ನವದೆಹಲಿ, ಮಾ. ೮: ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ೨ ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಅಂರ‍್ರಾಷ್ಟಿçÃಯ ವಿಮಾನಗಳ ಹಾರಾಟ ತಾ. ೨೭ ರಿಂದ ಪುನರಾರಂಭಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸಿದ್ಧತೆ ನಡೆಸಿದೆ. ಜಾಗತಿಕವಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗತೊಡಗಿದಾಗ ಮಾರ್ಚ್ ೨೩, ೨೦೨೦ ರಂದು ಅಂರ‍್ರಾಷ್ಟಿçÃಯ ವಿಮಾನಯಾನ ಸ್ಥಗಿತಗೊಳಿಸಲಾಗಿತ್ತು. ಡಿಸೆಂಬರ್ ೧೫, ೨೦೨೧ ರಿಂದ ಕ್ರಮೇಣ ಪುನರಾರರಂಭಿಸುವುದಾಗಿ ಘೋಷಿಸಿತ್ತು. ಆದರೆ ಓಮಿಕ್ರಾನ್ ಕೋವಿಡ್ ರೂಪಾಂತರದ ಪ್ರಾರಂಭದಿAದಾಗಿ ವಿಮಾನ ಹಾರಾಟ ದಿನಾಂಕವನ್ನು ಮುಂದೂಡಲಾಗಿತ್ತು.

ಗೃಹ ರಕ್ಷಕ ಸ್ವಯಂಸೇವಕರ ಕರ್ತವ್ಯ ಭತ್ಯೆ ಹೆಚ್ಚಳ

ಬೆಂಗಳೂರು, ಮಾ. ೮: ರಾಜ್ಯದಲ್ಲಿ ಪೊಲೀಸ್ ಇಲಾಖೆಯನ್ನು ಹೊರತುಪಡಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೩,೦೨೫ ಗೃಹ ರಕ್ಷಕ ಸ್ವಯಂಸೇವಕರ ಭತ್ಯೆಯನ್ನು ಹೆಚ್ಚಿಸಿ, ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸರಕಾರದ ಈ ನಿರ್ಧಾರದಿಂದ ರಾಜ್ಯದ ವಿವಿಧ ಇಲಾಖೆಯಲ್ಲಿ ಗೃಹ ರಕ್ಷಕ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಬಹಳ ದಿನಗಳ ಬೇಡಿಕೆ ಈಡೇರಿಸಿದಂತೆ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಹೊರತುಪಡಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸರಿ ಸುಮಾರು ೩,೦೨೫ ಗೃಹ ರಕ್ಷಕ ಹಾಗೂ ಪೌರ ರಕ್ಷಣಾ ಇಲಾಖೆಯ ಸ್ವಯಂಸೇವಕರಿಗೆ ನೀಡಲಾಗುತ್ತಿರುವ ದಿನ ಭತ್ಯೆಯನ್ನು ರೂಪಾಯಿ ೬೦೦ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಗೃಹ ರಕ್ಷಕರನ್ನು ವರ್ಷದಲ್ಲಿ ೩೫೩ ದಿನಗಳ ಕಾಲ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿರುವುದರಿಂದ ಬೆಂಗಳೂರು ನಗರದಲ್ಲಿ ರೂಪಾಯಿ ೪೫೫ ರಿಂದ ರೂ. ೬೦೦ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ರೂಪಾಯಿ ೩೮೦ ರಿಂದ ರೂ. ೬೦೦ಕ್ಕೆ ಹೆಚ್ಚಳ ಮಾಡಬಹುದೆಂದು ಪ್ರಸ್ತಾವನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಮಾನ ಹೈಜಾಕ್ ಮಾಡಿದ್ದ ಭಯೋತ್ಪಾದಕ ಜಹೂರ್ ಮಿಸ್ತಿç ಹತ್ಯೆ

ಕರಾಚಿ, ಮಾ. ೮: ೧೯೯೯ರಲ್ಲಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಭಯೋತ್ಪಾದಕನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ೧೯೯೯ರಲ್ಲಿ ಏರ್ ಇಂಡಿಯಾ ವಿಮಾನ ಐಸಿ-೮೧೪ ಅನ್ನು ಹೈಜಾಕ್ ಮಾಡಿದ ಭಯೋತ್ಪಾದಕರಲ್ಲಿ ಒಬ್ಬನಾದ ಜಹೂರ್ ಮಿಸ್ತಿç ಅಲಿಯಾಸ್ ಜಾಹಿದ್ ಅಖುಂಡ್ ಪಾಕಿಸ್ತಾನದ ಕರಾಚಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಜಹೂರ್ ಮಿಸ್ತಿç ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಜಹೂರ್ ಭಯೋತ್ಪಾದಕ ಸಂಘಟನೆ ಜೈಶ್-ಎ-ಮುಹಮ್ಮದ್ ಜೊತೆ ಸಂಬAಧ ಹೊಂದಿದ್ದ ಎನ್ನಲಾಗಿದೆ. ಉದ್ಯಮಿಯಂತೆ ನಟಿಸಿ ತಲೆಮರೆಸಿಕೊಂಡಿದ್ದ. ಇಬ್ಬರು ದಾಳಿಕೋರರು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮಾಸ್ಕ್ ಧರಿಸಿದ್ದರಿಂದ ಗುರುತು ಪತ್ತೆಯಾಗಿಲ್ಲ. ಬೈಕ್ ಸವಾರರಿಬ್ಬರೂ ಆ ಪ್ರದೇಶದಲ್ಲಿ ವಿಹಾರ ನಡೆಸಿದ ಬಳಿಕ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ೧೯೯೯ರಲ್ಲಿ ಐಸಿ-೮೧೪ ವಿಮಾನದ ೧೭೬ ಪ್ರಯಾಣಿಕರನ್ನು ಅಪಹರಣಕಾರರು ಏಳು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿದ್ದರು. ವಿಮಾನವು ಕಠ್ಮಂಡುವಿನಿAದ ಹೊರಟು ದೆಹಲಿಗೆ ಹೋಗುತ್ತಿತ್ತು ಆದರೆ ಅದನ್ನು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರ್‌ಗೆ ಕೊಂಡೊಯ್ಯಲಾಗಿತ್ತು.

ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನ ಮಳೆ ಸಾಧ್ಯತೆ

ಬೆಂಗಳೂರು, ಮಾ. ೮: ಹಿಂದೂ ಮಹಾಸಾಗರದಲ್ಲಿ ಚಂಡಮಾರುತದ ಕಾರಣದಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನ ತುಂತುರು ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತದ ಕಾರಣ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ಕನಿಷ್ಟ ತಾಪಮಾನ ಕಂಡುಬAದಿತ್ತು. ೩೦.೭ ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು ೧೮.೭ ಡಿಗ್ರಿ ಸೆಲ್ಸಿಯಸ್ ಕನಿಷ್ಟ ತಾಪಮಾನ ದಾಖಲಾಗಿತ್ತು. ನಗರದ ಹಲವೆಡೆ ತುಂತುರ ಹನಿಯ ಅನುಭವ ಕಂಡುಬAದಿತ್ತು. ಚಂಡಮಾರುತ ದಕ್ಷಿಣ ಒಳನಾಡು ಮತ್ತು ಸುತ್ತಮುತ್ತ ಚದರುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

೧೧ ಭಾರತೀಯ ಮೀನುಗಾರರ ಬಿಡುಗಡೆ

ಕೊಲಂಬೊ/ನವದೆಹಲಿ, ಮಾ. ೮: ಉತ್ತರ ಶ್ರೀಲಂಕಾದ ಜೈಲಿನಲ್ಲಿ ಬಂಧಿತರಾಗಿದ್ದ ಹನ್ನೊಂದು ಭಾರತೀಯ ಮೀನುಗಾರರನ್ನು ಜಾಫ್ನಾ ನ್ಯಾಯಾಲಯ ಬಿಡುಗಡೆ ಮಾಡಿದೆ ಎಂದು ಭಾರತೀಯ ಹೈಕಮಿಷನ್ ತಿಳಿಸಿದೆ. ಜಾಫ್ನಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅವರು ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸುವ ಮೂಲಕ ಕಾನೂನಿನ ಸಹಾಯ ಒದಗಿಸಿದ್ದಾರೆ ಎಂದು ಹೈಕಮಿಷನ್ ಹೇಳಿದೆ. ಜಾಫ್ನಾ ಜೈಲಿನಲ್ಲಿ ಬಂಧಿತರಾಗಿದ್ದ ೧೧ ಭಾರತೀಯ ಮೀನುಗಾರರನ್ನು ಕೇಟ್ಸ್ ಕೋರ್ಟ್ ಬಿಡುಗಡೆ ಮಾಡಿದೆ. ನ್ಯಾಯಾಲಯದಲ್ಲಿ ಅವರ ಪ್ರಕರಣವನ್ನು ಪ್ರತಿನಿಧಿಸುವ ಮೂಲಕ ಅವರಿಗೆ ಕಾನೂನು ಸಹಾಯವನ್ನು ಒದಗಿಸಿದರು ಮತ್ತು ಅವರ ಆರಂಭಿಕ ಬಿಡುಗಡೆಗೆ ಅನುಕೂಲವಾಯಿತು ಎಂದು ಹೈಕಮಿಷನ್ ಟ್ವೀಟ್‌ನಲ್ಲಿ ತಿಳಿಸಿದೆ. ಶ್ರೀಲಂಕಾದ ಕಡಲ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಜನವರಿಯಲ್ಲಿ, ಶ್ರೀಲಂಕಾ ನ್ಯಾಯಾಲಯವು ದ್ವೀಪ ರಾಷ್ಟçದ ಪ್ರಾದೇಶಿಕ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿರುವ ಆರೋಪದ ಮೇಲೆ ಬಂಧಿತರಾಗಿದ್ದ ೫೬ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು.