ಚೆಟ್ಟಳ್ಳಿ, ಮಾ. ೭: ಕುರಿಕಡೆ ಫ್ಯಾಮಿಲಿ ಅಸೋಸಿಯೇಷನ್ ಆಯೋಜಿಸಿದ ೧೯ನೇ ವರ್ಷದ ಎಡಪಾಲ ಫ್ಯಾಮಿಲಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಯಕರೆ ತಂಡ ಸತತ ಮೂರನೇ ಬಾರಿಗೆ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದೆ, ಪಾಟೀಲತ್ ತಂಡವು ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ಹುತಾತ್ಮರಾದ ಯೋಧ ಶಹೀದ್ ಅಲ್ತಾಫ್ ಅಹಮದ್ ಅವರಿಗೆ ಮೌನಾಚಾರಣೆ ಮೂಲಕ ಆತ್ಮಕ್ಕೆ ಶಾಂತಿ ಕೋರಿದ ಬಳಿಕ ಪಂದ್ಯಾಟ ಆರಂಭವಾಯಿತು. ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರವ ಕುರಿಕಡೆ ಅಜರುದ್ದೀನ್ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಫೈನಲ್ ೫ ಓವರ್ ಪಂದ್ಯಾಟದಲ್ಲಿ ಪೊಯಕರೆ ತಂಡವು ೮೩ ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.

ಪಾಟೀಲತ್ ತಂಡವು ೬೩ ರನ್‌ಗಳಿಂದ ಸೋಲು ಕಂಡಿತು. ಮ್ಯಾನ್ ಆಫ್ ದಿ ಮ್ಯಾಚ್ ರಫೀಕ್ ಪೊಯಕರೆ, ಮ್ಯಾನ್ ಆಫ್ ದಿ ಸೀರಿಸ್ ಉಸ್ಮಾನ್ ಪೊಯಕರೆ, ಬೆಸ್ಟ್ ಬೌಲರ್ ಷಂಶುದ್ದೀನ್ ಪೊಯಕರೆ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಸಾಬೀತ್ ಪಾಟೀಲತ್ ಪಡೆದುಕೊಂಡರು. ಕೆಮಾಡ್ ಮೂರನೇ ಹಾಗೂ ಎರಟೆಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು. ಪಂದ್ಯಾವಳಿಯ ತೀರ್ಪುಗಾರರಾಗಿ ವೀರಾಜಪೇಟೆಯ ದರ್ಶನ್ ಹಾಗೂ ಅಫ್ರಾಜ್ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆ ಯನ್ನು ಸಫ್ವಾನ್, ಅಜರುದ್ದೀನ್, ಹಾರಿಸ್, ಸ್ಕೋರರ್ ಆಗಿ ಲತೀಫ್ ಹಾಶಿಮ್, ಮಜೀದ್, ಝಕರಿಯ, ಹಾಗೂ ಶಿಯಾಬ್ ಕಾರ್ಯನಿರ್ವಹಿಸಿದರು.