ಸೋಮವಾರಪೇಟೆ, ಮಾ. ೬: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ-ದುರ್ಗಾವಾಹಿನಿಯ ಆಶ್ರಯದಲ್ಲಿ ತಾ. ೭ರಂದು (ಇಂದು) ಬೆಳಿಗ್ಗೆ ೧೦ ಗಂಟಗೆ ಪಟ್ಟಣದಲ್ಲಿ ಹಿಂದೂ ಜನಜಾಗೃತಿ ಸಮಾವೇಶ ನಡೆಯಲಿರುವ ಹಿನ್ನೆಲೆ, ಪೊಲೀಸರಿಂದ ಪಟ್ಟಣದಲ್ಲಿ ಪೆರೇಡ್ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಖುದ್ದು ಪೆರೇಡ್‌ನಲ್ಲಿ ಭಾಗಿಯಾಗಿ, ಪಟ್ಟಣದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರಲ್ಲದೇ, ಕಾರ್ಯಕ್ರಮಕ್ಕೆ ಅಗತ್ಯ ಬಂದೋಬಸ್ತ್ ಕಲ್ಪಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮದಿಂದಾಗಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗಬಾರದು. ಕಿಡಿಗೇಡಿ ಕೃತ್ಯಗಳು ನಡೆಯದಂತೆ ಕ್ರಮವಹಿಸಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಬಂದೋಬಸ್ತ್ ನಿಯೋಜಿಸಬೇಕು. ಸಂತೆ ದಿನವಾದ ಹಿನ್ನೆಲೆ ಹೆಚ್ಚಿನ ಸಾರ್ವಜನಿಕರು ಹಾಗೂ ವಾಹನಗಳು ಪಟ್ಟಣಕ್ಕೆ ಆಗಮಿಸುವ ಹಿನ್ನೆಲೆ ಸಂಚಾರ ಸೇರಿದಂತೆ ಇನ್ನಿತರ ವ್ಯವಸ್ಥೆಗಳಿಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಎಸ್ಪಿ ಸೂಚನೆ ನೀಡಿದರು.

ಪೊಲೀಸ್ ಸಿಬ್ಬಂದಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತಮಗೂ ಕುಟುಂಬವಿದ್ದು, ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. ನಂತರ ಬಂದೋಬಸ್ತ್ ಸಂಬAಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಡಿವೈಎಸ್‌ಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್‌ಗಳೊಂದಿಗೆ ಸಮಾಲೋಚನೆ ನಡೆಸಿದರು.

ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಿAದ ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಆಸ್ಟç ಕಾಫಿ ಮುಂಭಾಗದ ರಸ್ತೆ, ಮುಖ್ಯರಸ್ತೆ ಮಾರ್ಗವಾಗಿ ಜೇಸೀ ವೇದಿಕೆಯವರೆಗೆ

(ಮೊದಲ ಪುಟದಿಂದ) ಪೊಲೀಸರಿಂದ ಪಥಸಂಚಲನ ನಡೆಯಿತು. ೨ ಕೆಎಸ್‌ಆರ್‌ಪಿ, ೨ ಡಿಎಆರ್ ಹಾಗೂ ಸೋಮವಾರ ಪೇಟೆ ಪೊಲೀಸ್ ಠಾಣಾ ಸಿಬ್ಬಂದಿ ಗಳು ಪೆರೇಡ್‌ನಲ್ಲಿ ಭಾಗಿಯಾಗಿದ್ದರು.

ವರಿಷ್ಠಾಧಿಕಾರಿ ಅಯ್ಯಪ್ಪ, ಡಿವೈಎಸ್‌ಪಿ ಶೈಲೇಂದ್ರ, ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಬಿ.ಜಿ. ಮಹೇಶ್, ಎಂ. ಮಹೇಶ್, ಪರಶಿವಮೂರ್ತಿ ಸೇರಿದಂತೆ ಠಾಣಾಧಿಕಾರಿಗಳು ಪಟ್ಟಣದಲ್ಲಿ ಪೆರೇಡ್‌ನಲ್ಲಿದ್ದರು.

ಮದ್ಯ ಮಾರಾಟ ನಿಷೇಧ: ಹಿಂದೂ ಜನಜಾಗೃತಿ ಸಮಾವೇಶ ನಡೆಯಲಿರುವ ಹಿನ್ನೆಲೆ ತಾ. ೭ರಂದು (ಇಂದು) ಬೆಳಿಗ್ಗೆ ೬ ಗಂಟೆಯಿAದ ಮಧ್ಯರಾತ್ರಿ ೧೨ ಗಂಟೆಯವರೆಗೆ ಸೋಮವಾರಪೇಟೆ ಪಟ್ಟಣ ಹಾಗೂ ಪೊಲೀಸ್ ಠಾಣಾ ವ್ಯಾಪ್ತಿಯ ೧೫ ಕಿ.ಮೀ. ಅಂತರದ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.

ಸೋಮವಾರಪೇಟೆ ಮತೀಯ ಸೂಕ್ಷö್ಮ ಪ್ರದೇಶವಾಗಿದೆ. ಇದರೊಂದಿಗೆ ದಿಕ್ಸೂಚಿ ಭಾಷಣಕಾರರಾಗಿರುವ ಚೈತ್ರ ಕುಂದಾಪುರ ಅವರು ಜಿಲ್ಲೆಗೆ ಆಗಮಿಸಲು ಅವಕಾಶ ನೀಡಬಾರದು ಎಂದು ಕೆಲ ಸಂಘಟನೆಗಳು ಮನವಿಯನ್ನೂ ಮಾಡಿವೆ. ಈ ಹಿನ್ನೆಲೆ ಸದರಿ ಕಾರ್ಯಕ್ರಮ ಸಂದರ್ಭ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಕಾಪಾಡುವ ಉದ್ದೇಶದಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲ ೧೫ ಕಿ.ಮೀ. ವ್ಯಾಪ್ತಿಯಲ್ಲಿ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೊಟೇಲ್‌ಗಳಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಸಿ. ಸತೀಶ್ ಅವರು ಆದೇಶ ಹೊರಡಿಸಿದ್ದಾರೆ.

ಬಂದೋಬಸ್ತ್ಗೆ ೩೦೦ ಸಿಬ್ಬಂದಿಗಳು: ಹಿಂದೂ ಜನಜಾಗೃತಿ ಸಮಾವೇಶದಲ್ಲಿ ೨ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ೨ ಕೆಎಸ್‌ಆರ್‌ಪಿ, ೪ ಡಿಎಆರ್ ತುಕಡಿ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ಸಿಬ್ಬಂದಿಗಳೊAದಿಗೆ ಹಾಸನ ಮೈಸೂರು ಜಿಲ್ಲೆಯಿಂದ ೩೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.