*ಗೋಣಿಕೊಪ್ಪ, ಮಾ. ೬: ಹಳೆಯ ವಿದ್ಯಾರ್ಥಿಗಳಿಂದ ಧನ ಸಹಾಯ ಪಡೆದು ನಾಲ್ಕು ಕೊಠಡಿ ನಿರ್ಮಿಸಲು ಗೋಣಿಕೊಪ್ಪ ಕಾವೇರಿ ಕಾಲೇಜು ಅಲುಮ್ನಿ ಅಸೋಸಿಯೇಷನ್ ವತಿಯಿಂದ ನಿರ್ಧಾರ ತೆಗೆದುಕೊಳ್ಳಲಾಯಿತು.

ಅಲುಮ್ನಿ ಅಧ್ಯಕ್ಷ ಮಾಳೇಟೀರ ಬಿ. ಕಾವೇರಪ್ಪ ಅಧ್ಯಕ್ಷತೆಯಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.

ಅಲುಮ್ನಿ ವತಿಯಿಂದ ನಿರ್ಮಿಸಿರುವ ಕಂಪ್ಯೂಟರ್ ಲ್ಯಾಬ್ ಕಟ್ಟಡದ ಮೇಲಂತಸ್ತಿನಲ್ಲಿ ಮತ್ತೆ ೪ ಕೋಣೆ ನಿರ್ಮಿಸುವುದು, ಇದರ ಮೂರು ಕೊಠಡಿಯನ್ನು ಹೆಚ್ಚುವರಿ ತರಗತಿಗೆ, ಒಂದು ಕೋಣೆಯನ್ನು ಅಲುಮ್ನಿ ಕಚೇರಿಗೆ ಬಳಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಸಂಚಾಲಕಿ ಎಸ್.ಎಂ. ರಜನಿ, ಉಪಾಧ್ಯಕ್ಷ ಕೆ.ಸಿ. ಅಚ್ಚಯ್ಯ, ಪ್ರ. ಕಾರ್ಯದರ್ಶಿ ಪಳಂಗAಡ ವಾಣಿ ಚಂಗಪ್ಪ, ಖಜಾಂಚಿ ಕಳ್ಳಿಚಂಡ ಸಿ. ಮುತ್ತಪ್ಪ ಇದ್ದರು.