ಸುಂಟಿಕೊಪ್ಪ, ಮಾ. ೫: ಸಮಾಜದ ಎಲ್ಲಾ ವರ್ಗಗಳನ್ನು ಒಗ್ಗೂಡಿಸುವ ಮೂಲಕ ಕ್ರೀಡೆ, ಸಾಂಸ್ಕೃತಿಕ ಚಟುಚವಟಿಕೆಗಳನ್ನು ನಡೆಸುತ್ತಾ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಶ್ಲಾಘನೀಯ. ಕಳೆದ ೨೨ ವರ್ಷಗಳಿಂದ ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಸಂಘ ಸಮಾಜಕ್ಕೆ ಮಾದರಿಯಾಗಿದೆಯೆಂದು ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಹೇಳಿದರು.

ಕಾನ್‌ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಡ್ಯಾನ್ಸ್ ಮೇಳ, ಸಾಂಸ್ಕೃತಿಕ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮಸ್ಥರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗಳಲ್ಲಿ ಯುವಕ ಸಂಘಗಳ ಪಾತ್ರ ಮಹತ್ವದಾಗಿದ್ದು, ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಕೇವಲ ಕ್ರೀಡೆಗೆ ಸೀಮಿತವಾಗದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಊರಿನ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ದಿನೇಶ್, ಪ್ರತಿಯೊಬ್ಬ ಮಕ್ಕಳಲ್ಲಿ ತನ್ನದೆಯಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವಾಗಬೇಕು ಎಂದರು. ಮಂಜಿಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ೧೮ ವರ್ಷಗಳಿಂದ ಶಿಕ್ಷಕರರಾಗಿ ಸೇವೆಸಲ್ಲಿಸುತ್ತಿದ್ದ ದಿನೇಶ್ ಹಾಗೂ ೧೩ ವರ್ಷಗಳಿಂದ ಶಿಕ್ಷಕಿಯಾಗಿರುವ ಲತಾ ವಿ.ಪೈ, ಕ್ರೀಡಾ ಕ್ಷೇತ್ರದಲ್ಲಿ ೪ ಬಾರಿ ಚಿನ್ನದ ಪದಕಗಳಿಸಿದ ತಿರುಮಲೈ, ನಾಕೂರು ಶಿರಂಗಾಲ ಗ್ರಾ.ಪಂ. ಕಚೇರಿ ಸಿಬ್ಬಂದಿ ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೂಬಿ ಹಾಗೂ ಚಂದ್ರಕಲಾ ಮುಂಬಡ್ತಿ ಪಡೆದುಕೊಂಡು ವರ್ಗಾವಣೆ ಗೊಂಡಿದ್ದಾರೆ. ಇವರುಗಳ ಸೇವೆ ಯನ್ನು ಪರಿಗಣಿಸಿ ವೇದಿಕೆಯಲ್ಲಿದ್ದ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಬಿ.ಜಿ. ರಮೇಶ್, ಉಪಾಧ್ಯಕ್ಷ ಸತೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನ, ಸದಸ್ಯರುಗಳಾದ ಮಂದೋಡಿ ಜಗನ್ನಾಥ್, ರಾಧಾಮಣಿ, ಅರುಣಾ ಕುಮಾರಿ, ಪ್ರೇಮ, ಗ್ರಾ.ಪಂ. ಮಾಜಿ ಸದಸ್ಯ ಕೆ.ಪಿ. ವಸಂತ ಕುಮಾರ್, ತಾಲೂಕು ಪದಕಗಳಿಸಿದ ತಿರುಮಲೈ, ನಾಕೂರು ಶಿರಂಗಾಲ ಗ್ರಾ.ಪಂ. ಕಚೇರಿ ಸಿಬ್ಬಂದಿ ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೂಬಿ ಹಾಗೂ ಚಂದ್ರಕಲಾ ಮುಂಬಡ್ತಿ ಪಡೆದುಕೊಂಡು ವರ್ಗಾವಣೆ ಗೊಂಡಿದ್ದಾರೆ. ಇವರುಗಳ ಸೇವೆ ಯನ್ನು ಪರಿಗಣಿಸಿ ವೇದಿಕೆಯಲ್ಲಿದ್ದ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಬಿ.ಜಿ. ರಮೇಶ್, ಉಪಾಧ್ಯಕ್ಷ ಸತೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನ, ಸದಸ್ಯರುಗಳಾದ ಮಂದೋಡಿ ಜಗನ್ನಾಥ್, ರಾಧಾಮಣಿ, ಅರುಣಾ ಕುಮಾರಿ, ಪ್ರೇಮ, ಗ್ರಾ.ಪಂ. ಮಾಜಿ ಸದಸ್ಯ ಕೆ.ಪಿ. ವಸಂತ ಕುಮಾರ್, ತಾಲೂಕು