ಬೆAಗಳೂರು, ಮಾ. ೫: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ವಾಟ್ಸ್ ಅಪ್ ಮೂಲಕ ರಾತ್ರಿ ಅಶ್ಲೀಲ ಸಂದೇಶ ಕಳಿಸಿ ಕಿರುಕುಳ ನೀಡಿದ ಆರೋಪದಡಿಯಲ್ಲಿ ಇಂದಿರಾನಗರ ಪೊಲೀಸರು ಖ್ಯಾತ ಫ್ಯಾಷನ್ ಗುರು ಮತ್ತು ಕೊರಿಯೋಗ್ರಾಫರ್ ಜಿಲ್ಲೆಯ ಮೂಲದ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆಡಂ ಬಿದ್ದಪ್ಪ ಅವರನ್ನು ಬಂಧಿಸಿದ್ದಾರೆ.
ನಟಿ ಸಂಜನಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಫೆಬ್ರವರಿ ೨೫ ರಂದು ರಾತ್ರಿ ೧೦ ಗಂಟೆಯಿAದ ೧೨ ಗಂಟೆಯವರೆಗೆ ಆಡಂ ತಮಗೆ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸುವ ಮೂಲಕ ಮಾನಸಿಕ ಹಿಂಸೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ಪಾಲಿಬೆಟ್ಟದಲ್ಲಿದ್ದ ಆಡಂ ಅವರನ್ನು ಬೆಂಗಳೂರಿಗೆ ಕರೆದೊಯ್ದು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅವರ ವಿರುದ್ಧ ಐಪಿಸಿ ೩೫೪ಏ, ೫೦೬, ೫೦೯ ಮತ್ತು ಐಟಿ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ.
ಮೆಸೇಜ್ ಕಳುಹಿಸಿದ ನಂತರ ಆಡಂ ಬಿದ್ದಪ್ಪ ಅದನ್ನು ಡಿಲೀಟ್ ಮಾಡಿದ್ದು, ಪೊಲೀಸರು ಮೊಬೈಲನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸಂಜನಾ ಅವರೂ ಅಶ್ಲೀಲ ಸಂಭಾಷಣೆಯ ಸ್ಕಿçÃನ್ ಶಾಟ್ ಅನ್ನು ಪೊಲೀಸರಿಗೆ ನೀಡಿದ್ದಾರೆ.