ಮಡಿಕೇರಿ, ಮಾ.೫: ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಅಭಿಯಾನವು ತಾ.೬ ರಿಂದ (ಇಂದಿನಿAದ) ಹತ್ತು ದಿನಗಳ ಕಾಲ ನಡೆಯಲಿದ್ದು, ಆ ದಿಸೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲ್ಯ ವಿವಾಹ ನಿಷೇಧ ಅಭಿಯಾನ ಕುರಿತಂತೆ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಬಾಲ್ಯ ವಿವಾಹ ನಿಷೇಧ ಅಭಿಯಾನವು ರಾಜ್ಯಾದ್ಯಂತ ತಾ.೬ ರಂದು ಆರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಿದ್ದಾರೆ. ಆ ದಿಸೆಯಲ್ಲಿ ಪ್ರತೀ ಜಿಲ್ಲೆಯಲ್ಲಿಯೂ ಅಭಿಯಾನ ಆರಂಭಗೊಳ್ಳಲಿದ್ದು, ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಚಾಲನೆ ನೀಡಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಬಾಲ್ಯ ವಿವಾಹ ನಿಷೇಧ ಅಭಿಯಾನ ಕುರಿತಂತೆ ಎಲ್ಇಡಿ ಬಳಸಿ ವಾಹನದ ಮೂಲಕ ಪ್ರಚಾರ ನಡೆಯಲಿದ್ದು, ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುದ್ದಣ್ಣ ಅವರು ಮಾಹಿತಿ ನೀಡಿ, ಜಿಲ್ಲೆಯ ೧೬ ಹೋಬಳಿಗಳಲ್ಲಿ ಹತ್ತು ದಿನಗಳ ಕಾಲ ೫೦ ಸ್ಥಳಗಳಲ್ಲಿ ಬಾಲ್ಯ ವಿವಾಹ ನಿಷೇಧ ಬಗ್ಗೆ ಎಲ್ಇಡಿ ಅಳವಡಿಸಿ ವಾಹನದ ಮೂಲಕ ಮಾಹಿತಿ ಪ್ರದರ್ಶನ ನಡೆಯಲಿದ್ದು, ಈ ಸಂಬAಧ ರೂಟ್ಮ್ಯಾಪ್ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾ.೮ ರಂದು ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮದ ಸಂದರ್ಭದಲ್ಲಿ ಕಾನೂನು ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮುದ್ದಣ್ಣ ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ ಅವರು ಬಾಲ್ಯ ವಿವಾಹ ನಿಷೇಧ ಅಭಿಯಾನ ಸಂದರ್ಭದಲ್ಲಿ ಕರಪತ್ರ ವಿತರಿಸುವುದು, ಸಂದರ್ಶನ ನೀಡುವುದು ಮತ್ತಿತರವನ್ನು ಕೈಗೊಳ್ಳುವಂತೆ ಸಲಹೆ ಮಾಡಿದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಯಾವ ಯಾವ ಸ್ಥಳಗಳಲ್ಲಿ ಎಲ್ಇಡಿ ಪ್ರಚಾರಾಂದೋಲನ ವಾಹನ ತೆರಳಲಿದೆ ಆ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಸ್ತಿçà ಶಕ್ತಿ ಒಕ್ಕೂಟದ ಅಧ್ಯಕ್ಷ ರೆಹನಾ ಸುಲ್ತಾನ್ ಅವರು ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಹಾಗೂ ಬಾಲ್ಯ ವಿವಾಹ ನಿಷೇಧ ಪ್ರಚಾರಾಂದೋಲನಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಕಾರ್ಯಕ್ರಮ ಅಧಿಕಾರಿ ಪೂಣಚ್ಚ, ಸಿಡಿಪಿಒಗಳಾದ ಅರುಂಧತಿ, ಅವರು ಇನ್ನಷ್ಟು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಆರ್.ವೆಂಕಟೇಶ್, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಇತರರು ಇದ್ದರು.
ಪ್ರಚಾರಾಂದೋಲನದ ರೂಟ್ ಮ್ಯಾಪ್ ಇಂತಿದೆ: ತಾ.೬ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಗಾಂಧಿ ಮೈದಾನ, ಬೆ:೧೧.೩೦ ಗಂಟೆಗೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಮಧ್ಯಾಹ್ನ ೧೨.೩೦ ಗಂಟೆಗೆ ಬಾಲಕಿಯರ ಬಾಲಮಂದಿರ ಸಭಾಂಗಣ, ಮಧ್ಯಾಹ್ನ ೨ ಗಂಟೆಗೆ ಮದೆನಾಡು ಗ್ರಾಮ ಪಂಚಾಯಿತಿ, ಮಧ್ಯಾಹ್ನ ೩.೩೦ ಗಂಟೆಗೆ ಸಂಪಾಜೆ ಗ್ರಾ.ಪಂ.,
ತಾ.೭ ರಂದು ಬೆಳಗ್ಗೆ ೧೦.೩೦ ಗಂಟೆಗೆ ಬೆಟ್ಟಗೇರಿ ಶ್ರೀ ಉದಯ ಪ್ರೌಢಶಾಲೆ, ಬೆ: ೧೧.೩೦ ಗಂಟೆಗೆ ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ ೧೨.೩೦ ಗಂಟೆಗೆ ಭಾಗಮಂಡಲ ತಾವೂರು ಶ್ರೀ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ ೨ ಗಂಟೆಗೆ ನಾಪೋಕ್ಲು ಸರ್ಕಾರಿ ಪ್ರೌಢಶಾಲೆ, ಮಧ್ಯಾಹ್ನ ೩.೩೦ ಗಂಟೆಗೆ ನೆಲಜಿ ಸರ್ಕಾರಿ ಪ್ರೌಢ ಶಾಲೆ,
ತಾ.೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ಚೆಟ್ಟಳ್ಳಿ ಗ್ರಾ.ಪಂ., ಬೆ.೧೧.೩೦ ಗಂಟೆಗೆ ಸುಂಟಿಕೊಪ್ಪ ಅಂಬೇಡ್ಕರ್ ಭವನ, ಮಧ್ಯಾಹ್ನ ೧೨.೩೦ ಗಂಟೆಗೆ ಮಾದಾಪುರ ಗ್ರಾ.ಪಂ., ಮಧ್ಯಾಹ್ನ ೨ ಗಂಟೆಗೆ ಬೇಳೂರು ಗಣಪತಿ ದೇವಸ್ಥಾನ, ಮಧ್ಯಾಹ್ನ ೩.೩೦ ಗಂಟೆಗೆ ಹಾನಗಲ್ಲು ಗ್ರಾ.ಪಂ.,
ತಾ.೯ ರಂದು ಬೆಳಗ್ಗೆ ೧೦.೩೦ ಗಂಟೆಗೆ ಶಾಂತಳ್ಳಿ ಸಮುದಾಯ ಭವನ, ಬೆಳಗ್ಗೆ ೧೧.೩೦ ಗಂಟೆಗೆ ಸೋಮವಾರಪೇಟೆಯ ಸೆಂಟ್ ಜೋಸೆಫ್ ಕಾಲೇಜು, ಮಧ್ಯಾಹ್ನ ೧೨.೩೦ ಗಂಟೆಗೆ ಸೋಮವಾರಪೇಟೆ ಜೆ.ಸಿ.ವೇದಿಕೆ (ತಾಲೂಕು ಕಚೇರಿ ಹತ್ತಿರ), ಮಧ್ಯಾಹ್ನ ೨ ಗಂಟೆಗೆ ಗೌಡಳ್ಳಿ ಹಳೇ ಪೋಸ್ಟ್ ಆಫೀಸ್, ಮಧ್ಯಾಹ್ನ ೩.೩೦ ಗಂಟೆಗೆ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ.
ತಾ.೧೦ ರಂದು ಬೆ.೧೦.೩೦ ಗಂಟೆಗೆ ಕೊಡ್ಲಿಪೇಟೆ ಗ್ರಾ.ಪಂ., ಬೆ:೧೧.೩೦ ಗಂಟೆಗೆ ಆಲೂರು ಸಿದ್ದಾಪುರ ಗ್ರಾ.ಪಂ., ಮಧ್ಯಾಹ್ನ ೧೨.೩೦ ಗಂಟೆಗೆ ನೇರುಗಳಲೆ ಗ್ರಾ.ಪಂ.(ಅಬ್ಬೂರು ಕಟ್ಟೆ), ಮಧ್ಯಾಹ್ನ ೨ ಗಂಟೆಗೆ ಕುಶಾಲನಗರ ತಾಲೂಕಿನ ಶಿರಂಗಾಲ ನಂದಿನಿ ಸಭಾಂಗಣ, ಮಧ್ಯಾಹ್ನ ೩.೩೦ ಗಂಟೆಗೆ ಹೆಬ್ಬಾಲೆ ಗ್ರಾ.ಪಂ.,
ತಾ.೧೧ ರಂದು ಬೆಳಗ್ಗೆ ೧೦.೩೦ ಗಂಟೆಗೆ ಕುಶಾಲನಗರ ಜೂನಿಯರ್ ಕಾಲೇಜು, ಬೆ: ೧೧.೩೦ ಗಂಟೆಗೆ ಕೂಡು ಮಂಗಳೂರು ಗ್ರಾ.ಪಂ., ಮಧ್ಯಾಹ್ನ ೧೨.೩೦ ಗಂಟೆಗೆ ಕುಶಾಲನಗರ ಬಸ್ ನಿಲ್ದಾಣ, ಮಧ್ಯಾಹ್ನ ೨ ಗಂಟೆಗೆ ಗುಡ್ಡೆ ಹೊಸೂರು ಗ್ರಾ.ಪಂ., ಮಧ್ಯಾಹ್ನ ೩.೩೦ ಗಂಟೆಗೆ ನೆಲ್ಲಿ ಹುದಿಕೇರಿ ಗ್ರಾ.ಪಂ.,
ತಾ. ೧೨ ರಂದು ಬೆಳಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಬೆ: ೧೧.೩೦ ಗಂಟೆಗೆ ಮಾಲ್ದಾರೆ, ಮಧ್ಯಾಹ್ನ ೧೨.೩೦ ಗಂಟೆಗೆ ಚೆನ್ನಯ್ಯನಕೋಟೆ, ಮಧ್ಯಾಹ್ನ ೨ ಗಂಟೆಗೆ ಪಾಲಿಬೆಟ್ಟ, ಮಧ್ಯಾಹ್ನ ೩.೩೦ ಗಂಟೆಗೆ ಅಮ್ಮತ್ತಿ,
ತಾ. ೧೩ ರಂದು ಬೆಳಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆ ಪಟ್ಟಣ, ಬೆ: ೧೧.೩೦ ಗಂಟೆಗೆ ವೀರಾಜಪೇಟೆ ಪಟ್ಟಣ, ಮಧ್ಯಾಹ್ನ ೧೨.೩೦ ಗಂಟೆಗೆ ಗೋಣಿಕೊಪ್ಪ, ಮಧ್ಯಾಹ್ನ ೨ ಗಂಟೆಗೆ ಗೋಣಿಕೊಪ್ಪ, ಮಧ್ಯಾಹ್ನ ೩.೩೦ ಗಂಟೆಗೆ ತಿತಿಮತಿ,
ತಾ.೧೪ ರಂದು ಬೆಳಗ್ಗೆ ೧೦.೩೦ ಗಂಟೆಗೆ ಬಾಳೆಲೆ, ಬೆಳಗ್ಗೆ ೧೧.೩೦ ಗಂಟೆಗೆ ಕಾನೂರು, ಮಧ್ಯಾಹ್ನ ೧೨.೩೦ ಗಂಟೆಗೆ ನಾಲ್ಕೇರಿ, ಮಧ್ಯಾಹ್ನ ೨ ಗಂಟೆಗೆ ನಾಣಚ್ಚಿ, ಮಧ್ಯಾಹ್ನ ೩.೩೦ ಗಂಟೆಗೆ ಕುಟ್ಟ,
ತಾ.೧೫ ರಂದು ಬೆಳಗ್ಗೆ ೧೦.೩೦ ಗಂಟೆಗೆ ಶ್ರೀಮಂಗಲ, ಬೆ. ೧೧.೩೦ ಗಂಟೆಗೆ ಟಿ.ಶೆಟ್ಟಿಗೇರಿ, ಮಧ್ಯಾಹ್ನ ೧೨.೩೦ ಗಂಟೆಗೆ ಬಿರುನಾಣಿ, ಮಧ್ಯಾಹ್ನ ೨ ಗಂಟೆಗೆ ಹುದಿಕೇರಿ, ಮಧ್ಯಾಹ್ನ ೩.೩೦ ಗಂಟೆಗೆ ಪೊನ್ನಂಪೇಟೆ. ಇಲ್ಲಿ ಎಲ್ಇಡಿ ವಾಹನದ ಮೂಲಕ ಪ್ರಚಾರಾಂದೋಲನ ನಡೆಯಲಿದೆ.