ಮಡಿಕೇರಿ, ಮಾ. ೫: ಬಹು ನಿರೀಕ್ಷಿತವಾಗಿದ್ದ ಪ್ರಸಕ್ತ ವರ್ಷದ ರಾಜ್ಯ ಮುಂಗಡ ಪತ್ರದ ಮಂಡನೆಯಾಗಿದೆ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯ ರಾಜ್ಯ ಅಯ ವ್ಯಯ ಪತ್ರವನ್ನು ಮಂಡಿಸಿದ್ದು ಕೊಡಗು ಜಿಲ್ಲೆಯ ಮಟ್ಟಿಗೆ ಜನತೆ ಇಟ್ಟಿದ್ದ ಕೆಲವು ನಿರೀಕ್ಷೆಗಳು ಹುಸಿಯಾಗಿದ್ದರೆ, ಇದರ ಕೊರಗಿನ ನಡುವೆಯೂ ಒಂದಷ್ಟು ಸಿಹಿ ಸುದ್ದಿಯನ್ನು ನೀಡುವಲ್ಲಿ ಸರಕಾರ ಕಸರತ್ತು ನಡೆಸಿದೆ.

ಪ್ರಸಕ್ತ ವರ್ಷದ ಬಜೆಟ್‌ಗೆ ಸಂಬAಧಿಸಿದAತೆ ಕೊಡಗು ಜಿಲ್ಲೆಯಲ್ಲಿ ಹತ್ತು ಹಲವಾರು ನಿರೀಕ್ಷೆಗಳೊಂದಿಗೆ ಕೆಲವೊಂದು ಆಶಾದಾಯಕವಾದ ಸುದ್ದಿ ಸಿಗುವ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ನಡೆದಿತ್ತು.

ಸಿಕ್ಕಿದ್ದೇನು...?

ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ ರೂ. ೧೦ ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಕೊಡಗು ಹಾಗೂ ದಕ್ಷಿಣ ಕನ್ನಡದಲ್ಲಿರುವ ಅರೆಭಾಷಿಕ ಜನಾಂಗಕ್ಕೆ ಸಂಬAಧಿಸಿದAತೆ ಅರೆಭಾಷೆಯ ಅಧ್ಯಯನ ಪೀಠವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸುವ ನಿರ್ಧಾರವನ್ನೂ ಸರಕಾರ ಘೋಷಣೆ ಮಾಡಿದೆ. ಇದರೊಂದಿಗೆ ರಾಜ್ಯದ ಇತರ ೭ ಜಿಲ್ಲೆಗಳ ಜತೆಗೆ ಕೊಡಗಿನಲ್ಲೂ ವಿನೂತನ ಮಾದರಿಯ ವಿಶ್ವವಿದ್ಯಾನಿಲಯ ಸ್ಥಾಪಿಸುವ ಮಹತ್ವದ ಅಂಶವೂ ಈ ಬಜೆಟ್‌ನಲ್ಲಿ ಅಳವಡಿಕೆಯಾಗಿದೆ.

ಕೊಡಗಿನ ಜೇನು ಕೃಷಿಯ ಉತ್ತೇಜನಕ್ಕೆಂದು ರೂ. ೫ ಕೋಟಿ ಮೀಸಲಿಡುವ ಪ್ರಸ್ತಾಪವೂ ಬಜೆಟ್ ಒಳಗೊಂಡಿದೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಆನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರೂ. ೧೦೦ ಕೋಟಿ ಅನುದಾನದಲ್ಲಿ ರೈಲು ಹಳಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಹೇಳಿರುವ ಪ್ರಸ್ತಾಪವೂ ಕೊಡಗಿಗೆ ನೆರವಾಗಲಿದೆ.

ರಾಜ್ಯದಲ್ಲಿ ವಾಯು ಮಾರ್ಗ ಸಂಪರ್ಕ ವ್ಯವಸ್ಥೆ ಬಲಪಡಿಸಲು ಚಿಕ್ಕಮಂಗಳೂರು ಮತ್ತು ಹಂಪಿಯ ಜತೆಯಲ್ಲಿ ಮಡಿಕೇರಿಯಲ್ಲಿಯೂ ರೂ. ೩೦ ಕೋಟಿ ವೆಚ್ಚದಲ್ಲಿ ಪಿ.ಪಿ.ಪಿ. (ಸರಕಾರಿ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಹೆಲಿಪೋರ್ಟ್ ಅಭಿವೃದ್ಧಿ ಮಾಡುವ ಯೋಜನೆಯನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇವಿಷ್ಟು ಪ್ರಮುಖವಾಗಿ ಕೊಡಗು ಜಿಲ್ಲೆಗೆ ವಿಶೇಷವಾಗಿ ಅನ್ವಯವಾಗುವಂತಹ ಬಜೆಟ್‌ನ ಅಂಶಗಳಾಗಿವೆ.

ಹುಸಿಯಾದ ನಿರೀಕ್ಷೆಗಳು

ಪ್ರಸಕ್ತ ಬಜೆಟ್‌ನಲ್ಲಿ ಕೊಡವ ಅಭಿವೃದ್ಧಿ ಮಂಡಳಿ ರಚನೆ, ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ, ಬೇರೆ ಜಿಲ್ಲೆಗಳಲ್ಲಿ ಇರುವಂತೆ ೧೦ ಹೆಚ್.ಪಿ. ತನಕದ ಪಂಪ್ ಸೆಟ್‌ಗೆ ಉಚಿತ ವಿದ್ಯುತ್‌ನ ಬೇಡಿಕೆ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲೆಗೆ ವಿಶೇಷ ಪ್ಯಾಕೇಜ್ ಸೇರಿದಂತೆ ರಸ್ತೆಗಳ ಅಭಿವೃದ್ಧಿಗೆ ಅನುದಾನ, ಹಲವು ವರ್ಷಗಳಿಂದ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಯೋಜನೆಗಳ ಅನುಷ್ಠಾನದಂತಹ ಪ್ರಮುಖ ವಿಚಾರಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ ಇವುಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಜನತೆಯಲ್ಲಿ ನಿರಾಶೆ ಮೂಡಿಸಿದೆ.

(ಮೊದಲ ಪುಟದಿಂದ)

ಅರೆಭಾಷೆ ಅಕಾಡೆಮಿ ಸ್ವಾಗತ

ಅರೆಭಾಷೆ ಅಧ್ಯಯನ ಪೀಠ ರಚನೆಯನ್ನು ಅರೆಭಾಷಾ ಅಕಾಡೆಮಿ ಸ್ವಾಗತಿಸಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಕಳೆದ ಎರಡು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರಬೇಕೆAಬ ಒತ್ತಾಯವನ್ನು ಸರಕಾರಕ್ಕೆ ವ್ಯಕ್ತಪಡಿಸಿತ್ತು. ಸತತ ಪ್ರಯತ್ನದ ಫಲವಾಗಿ ಕರ್ನಾಟಕ ಘನ ಸರಕಾರ ೨೦೨೨ರ ಬಜೆಟ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಮಂಜೂರು ಮಾಡಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹೇಳಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಬಿ.ಎಸ್. ಯಡಿಯೂರಪ್ಪ, ಸಚಿವರುಗಳಾದ ಅಂಗಾರ ಎಸ್., ವಿ. ಸುನಿಲ್ ಕುಮಾರ್, ಸಿ.ಎನ್. ಅಶ್ವತ್ಥನಾರಾಯಣ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಮತ್ತು ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ, ಶಾಸಕರುಗಳಾದ ಸಂಜೀವ ಮಠಂದೂರು, ಕೆ.ಜಿ. ಬೋಪಯ್ಯ ಇವರುಗಳ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಅರೆಭಾಷೆ ಸಂಶೋಧನಾ ಕೇಂದ್ರವನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿರುವ ಪ್ರತಿಯೊಬ್ಬರಿಗೂ ಅಕಾಡೆಮಿ ಕೃತಜ್ಞತೆ ವ್ಯಕ್ತಪಡಿಸುತ್ತದೆ ಎಂದು ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಹೇಳಿದ್ದಾರೆ.