ಕಡಂಗ, ಮಾ. ೩: ಜಿಲ್ಲೆಯ ಹುತಾತ್ಮ ಯೋಧ ಅಲ್ತಾಫ್ ಅಹಮದ್ ಅವರ ಪತ್ನಿ, ಮಕ್ಕಳನ್ನು ಎಡಪಾಲ ಗ್ರಾಮದ ಮನೆಯಲ್ಲಿ ಭೇಟಿ ಮಾಡಿದ ರಾಜ್ಯದ ಮಾಜಿ ಮಂತ್ರಿಗಳಾದ ಯು.ಟಿ. ಖಾದರ್ ಸಾಂತ್ವನ ಹೇಳಿದರು.

ಈ ಸಂದರ್ಭ ಸೈನಿಕನ ಕುಟುಂಬಕ್ಕೆ ಮನೆ ಇಲ್ಲದೆ ಇರುವ ಕಾರಣ ಸರಕಾರದಿಂದ ವಸತಿ ಯೋಜನೆಯಡಿ ಮನೆ ಕಲ್ಪಿಸಲು ಶ್ರಮಿಸುವುದಾಗಿ ಭರವಸೆಯಿತ್ತರು. ವೈಯಕ್ತಿಕವಾಗಿ ರೂ.೫೦೦೦೦ ಹಣವನ್ನು ಕುಟುಂಬ ಸದಸ್ಯರಿಗೆ ನೀಡಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ರಂಜಿ ಪೂಣಚ್ಚ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್, ಸುಬಿರ್, ಊರಿನ ಹಿರಿಯರಾದ ಶಾಫಿ, ಬಸೀರ್ ಮತ್ತು ಗ್ರಾಮಸ್ಥರು ಹಾಜರಿದ್ದರು.