ರಷ್ಯಾ ಉಕ್ರೇನ್ ಯುದ್ಧ: ಈವರೆಗೂ ೧೮ ಸಾವಿರ ಭಾರತೀಯರ ಸ್ಥಳಾಂತರ

ನವದೆಹಲಿ, ಮಾ. ೩: ರಷ್ಯಾ ಉಕ್ರೇನ್ ಯುದ್ಧದ ಹಿನ್ನಲೆಯಲ್ಲಿ ಭಾರತ ಸರ್ಕಾರ ನೀಡಿದ್ದ ಮೊದಲ ಮುನ್ಸೂಚನೆ ಬಳಿಕ ಈವರೆಗೂ ಉಕ್ರೇನ್‌ನಲ್ಲಿದ್ದ ಸುಮಾರು ೧೮ ಸಾವಿರ ಭಾರತೀಯರನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಉಕ್ರೇನ್ ರಾಜಧಾನಿ ಕ್ರೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಮೊದಲ ಮುನ್ನೆಚ್ಚರಿಕೆ ನೀಡಿದ ಬಳಿಕ ಈವರೆಗೂ ಒಟ್ಟು ೧೮,೦೦೦ ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಸಂಘರ್ಷ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ತವರಿಗೆ ಕರೆತರಲು ಆರಂಭಿಸಲಾಗಿರುವ ಆಪರೇಷನ್ ಗಂಗಾ ಕಾರ್ಯಾಚರಣೆ ಮುಂದುವರೆದಿದ್ದು, ಮೂರು ಐಎಎಫ್ ಸಿ-೧೭ ಮತ್ತು ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ ಜೆಟ್, ಗೋ ಫಸ್ಟ್ ಮತ್ತು ಗೋ ಏರ್‌ನಂತಹ ಇತರ ವಾಣಿಜ್ಯ ವಿಮಾನಗಳು ಸೇರಿದಂತೆ ೧೮ ವಿಮಾನಗಳನ್ನು ಮುಂದಿನ ೨೪ ಗಂಟೆಗಳ ಕಾರ್ಯಾಚರಣೆಗೆ ನಿಗದಿಪಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಅವರು, 'ನಮ್ಮ ಮೊದಲ ಸಲಹೆ ಬಿಡುಗಡೆಯಾದಾಗಿನಿಂದ ಒಟ್ಟು ೧೮,೦೦೦ ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ಆಪರೇಷನ್ ಗಂಗಾ ಅಡಿಯಲ್ಲಿ ೩೦ ವಿಮಾನಗಳು ಇದುವರೆಗೆ ೬,೪೦೦ ಭಾರತೀಯರನ್ನು ಉಕ್ರೇನ್‌ನಿಂದ ಮರಳಿ ಕರೆತಂದಿವೆ. ಮುಂದಿನ ೨೪ ಗಂಟೆಗಳಲ್ಲಿ, ೧೮ ವಿಮಾನಗಳನ್ನು ಕಾರ್ಯಾಚರಣೆಗೆ ನಿಗದಿಪಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು ೩೦ ವಿಮಾನಗಳು ಆಪರೇಷನ್ ಗಂಗಾ ಭಾಗವಾಗಿದೆ. ಪ್ರಸ್ತುತ ಪಶ್ಚಿಮ ಉಕ್ರೇನ್‌ನಲ್ಲಿ ಭಾರತೀಯರನ್ನು ಸ್ಥಳಾಂತರಿಸಲು ಸಾರಿಗೆ ಆಯ್ಕೆಗಳನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಉಕ್ರೇನ್‌ನಲ್ಲಿ ಭಾರತೀಯರಿಗೆ ಹಲ್ಲೆ; ಗನ್ ಪಾಯಿಂಟ್‌ನಲ್ಲಿ ಬೆದರಿಕೆ

ಬೆಂಗಳೂರು, ಮಾ. ೩: ಯುದ್ಧ ಬಾಧಿತ ಉಕ್ರೇನ್‌ನಲ್ಲಿ ಉಕ್ರೇನ್‌ನ ಸ್ಥಳೀಯ ಅಧಿಕಾರಿಗಳು ಮತ್ತು ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಗನ್‌ಪಾಯಿಂಟ್‌ನಲ್ಲಿ ಬೆದರಿಸುತ್ತಿದ್ದಾರೆ ಎಂದು ಖಾರ್ಕಿವ್‌ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಖಾರ್ಕಿವ್ ವಲಯದಿಂದ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿರುವ ರೈಲಿನಲ್ಲಿ ಪ್ರಯಾಣಿಸಲು ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ, ರೈಲುಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ಹೊರಹಾಕಲಾಗುತ್ತಿದೆ. ಒಂದು ವೇಳೆ ಪ್ರಶ್ನಿಸಿದರೆ, ಅವರಿಗೆ ಹೊಡೆಯಲಾಗುತ್ತಿದೆ. ಗನ್‌ಪಾಯಿಂಟ್‌ನಲ್ಲಿ ಬೆದರಿಸಲಾಗುತ್ತಿದೆ ಎಂದು ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಹರ್ಷಿತಾ ಮಾಧ್ಯಮದಲ್ಲಿ ವಿವರಿಸಿದ್ದಾರೆ. ರೈಲುಗಳು ಪ್ಲಾಟ್ ಫಾರಂಗೆ ಬಂದಾಗ ಬಾಗಿಲು ತೆರೆಯುವುದಿಲ್ಲ, ರೈಲುಗಳಲ್ಲಿ ಉಕ್ರೇನ್ ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಕ್ರೇನ್ ಜನರಲ್ಲಿಯೂ ಮೊದಲಿಗೆ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ತದನಂತರ ಅವರ ತಾಯಂದಿರು ಮತ್ತಿತರ ಮಹಿಳೆಯರಿಗೆ, ಕೊನೆಯಾದಾಗಿ ಉಕ್ರೇನ್‌ನ ಪುರುಷರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಭಾರತೀಯ ವಿದ್ಯಾರ್ಥಿಗಳು ರೈಲುಗಳನ್ನು ಪ್ರಯಾಣಿಸದಂತಾಗಿದೆ. ಒಬ್ಬ ವಿದ್ಯಾರ್ಥಿಗೆ ೧೦೦ ರಿಂದ ೨೦೦ ಡಾರ‍್ರ್ಸ್ ಪೀಕಲಾಗುತ್ತಿದೆ. ಅಷ್ಟು ಹಣ ಪಾವತಿಸಿದ ನಂತರವೂ ಭಾರತೀಯರು ಪ್ರಯಾಣಿಕರು ಅವಕಾಶ ನೀಡುತ್ತಿಲ್ಲ. ಕಳೆದ ಆರೇಳು ದಿನಗಳಿಂದ ಬಂಕರ್‌ನಲ್ಲಿ ವಾಸಿಸುತ್ತಿದ್ದೇವೆ. ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದಾಗ ೧೧ ಕಿ.ಮೀ. ನಡೆದು ಬಂದೇವು. ಆದರೆ, ರೈಲ್ವೆ ನಿಲ್ದಾಣ ತಲುಪಿದ ನಂತರ ಬೆಳಿಗ್ಗೆ ೮ ಗಂಟೆ ಮತ್ತು ಮಧ್ಯಾಹ್ನ ೧೨.೩೦ರ ಎರಡು ರೈಲಿನಲ್ಲಿಯೂ ತೆರಳಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

೧೩ನೇ ಬೆಂಗಳೂರು ಅಂರ‍್ರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು, ಮಾ. ೩: ೧೩ನೇ ಬೆಂಗಳೂರು ಅಂರ‍್ರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಅದ್ಧೂರಿ ಚಾಲನೆ ನೀಡಿದರು. ಇಂದು ಸಂಜೆ ಆಯೋಜಿತವಾಗಿದ್ದ ವರ್ಣರಂಜಿತ ಸಮಾರಂಭದಲ್ಲಿ ಬೆಂಗಳೂರು ೧೩ನೇ ಅಂರ‍್ರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ದೀಪ ಬೆಳಗಿಸುವ ಮೂಲಕ ಸಿನಿಮೋತ್ಸವ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಿನೆಮೋತ್ಸವವನ್ನು ವೇದಿಕೆಯಲ್ಲಿರುವ ಎಲ್ಲರೂ ಸಂತೋಷದಿAದ ಉದ್ಘಾಟನೆ ಗೊಳಿಸಿದ್ದೇವೆ. ಕೋವಿಡ್ ತೊಂದರೆಗಳು ಹಿನ್ನೆಲೆಗೆ ಸರಿದ ವಾತಾವರಣದಲ್ಲಿ ಸಿನೆಮೋತ್ಸವ ನಡೆಯುತ್ತಿದೆ. ಈ ಸಮಾರಂಭ ನಡೆಯುತ್ತಿರುವ ಸಭಾಂಗಣ ತುಂಬಿದೆ. ೧೯೩೪ ರಲ್ಲಿ ಇದೇ ದಿನ ಅಂದರೆ ಮಾರ್ಚ್ ೩ ರಂದು ಕನ್ನಡದಲ್ಲಿ ಸತಿ ಸುಲೋಚನಾ ಸಿನೆಮಾ ತೆರೆಕಂಡಿತು. ಈ ದಿನವನ್ನು ವಿಶ್ವ ಕನ್ನಡ ಸಿನೆಮಾ ದಿನವೆಂದು ಘೋಷಣೆ ಮಾಡುತ್ತಿದ್ದೇನೆ ಎಂದರು. ಕಡಿಮೆ ದಿನಗಳಲ್ಲಿ ಚಿತ್ರೋತ್ಸವ ಆಗಿದೆ. ಇಂದು ಡಿಜಿಟಲ್ ವರ್ಲ್ಡ್ ನಿರ್ಮಾಣವಾಗಿದೆ. ಹೊಸ ತಂತ್ರಜ್ಞಾನ ಚಿತ್ರರಂಗಕ್ಕೆ ದೊರೆಯುವಂತೆ ಮಾಡಬೇಕು ಕುಟುಂಬದವರು ಮತ್ತೆ ಒಟ್ಟಾಗಿ ಬಂದು ಸಿನೆಮಾ ನೋಡುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಗತ್ಯವಾದ ಸಹಾಯ ಸಹಕಾರವನ್ನು ಸರ್ಕಾರ ನೀಡಲಿದೆ. ಬೆಂಗಳೂರು ಚಲನಚಿತ್ರೋತ್ಸವ ನಂಬರ್ ಒನ್ ಆಗುವ ರೀತಿ ಮಾಡಬೇಕು. ಸಾಮಾಜಿಕ ಸಂದೇಶ ಇರುವಂಥ ಸಿನೆಮಾಗಳನ್ನು ತರಬೇಕು ಎಂದು ಸಿಎಂ ಹೇಳಿದರು.

ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ, ನಡೆಸಬಾರದು: ಹೈಕೋರ್ಟ್

ಬೆಂಗಳೂರು, ಮಾ. ೩: ಪ್ರಮುಖ ಬೆಳವಣಿಗೆಯೊಂದರಲ್ಲಿ, ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರೆ ಯಾವುದೇ ಭಾಗದಲ್ಲೂ ರಾಜಕೀಯ ಅಥವಾ ರಾಜಕೀಯೇತರ ಸಂಘಟನೆ ಅಥವಾ ಗುಂಪು ಯಾವುದೇ ಪ್ರತಿಭಟನೆ, ಮೆರವಣಿಗೆ ಅಥವಾ ಸಭೆಗಳನ್ನು ನಡೆಸಬಾರದು ಎಂದು ಹೈಕೋರ್ಟ್ ಗುರುವಾರ ಮಹತ್ವದ ಆದೇಶ ಹೊರಡಿಸಿದೆ. ಆಂದೋಲನಕ್ಕೆ ಮೀಸಲಾಗಿರುವ ಫ್ರೀಡಂ ಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಇತರ ಕಡೆ ಪ್ರತಿಭಟನೆ ಮತ್ತು ಪಾದಯಾತ್ರೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಫ್ರೀಡಂ ಪಾರ್ಕ್ ಹೊರತುಪಡಿಸಿ ಇತರ ಕಡೆ ಪ್ರತಿಭಟನೆ ಅಥವಾ ಅಂತಹ ಯಾವುದೇ ಚಟುವಟಿಕೆಗಳನ್ನು ನಡೆಸಿದರೆ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಕ್ರಮ ತೆಗೆದುಕೊಂಡ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಈ ಆದೇಶವನ್ನು ತಕ್ಷಣವೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ೨೦೨೧ರಲ್ಲಿ ನಗರದಲ್ಲಿ ಟ್ರಾಫಿಕ್‌ಗೆ ಸಂಬAಧಿಸಿದAತೆ ಹೈಕೋರ್ಟ್ಗೆ ಬರೆದ ಪತ್ರವನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಡಿಜಿ ಮತ್ತು ಐಜಿಪಿ ಮತ್ತು ನಗರ ಪೊಲೀಸ್ ಆಯುಕ್ತರು ಹಾಗೂ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ (ಎಸ್) ಅನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.