ಮಡಿಕೇರಿ, ಮಾ. ೩: ಕೊಡಗಿನ ಯುವ ಕ್ರಿಕೆಟಿಗ ಮಾಚಿಮಾಡ ವಿದ್ವತ್ ಕಾವೇರಪ್ಪ ಅವರ ಸಾಧನೆಯ ಆಧಾರದಲ್ಲಿ ಅವರಿಗೆ ಅವಕಾಶ ಕೂಡಿಬಂದಿದ್ದು, ಚೊಚ್ಚಲ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವನ್ನಾಡುವ ಮೂಲಕ ಗಮನ ಸೆಳೆದಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಪ್ರಮುಖವಾಗಿರುವ ರಣಜಿಟ್ರೋಫಿ ಕ್ರಿಕೆಟ್ಗೆ ಕರ್ನಾಟಕ ರಾಜ್ಯ ತಂಡಕ್ಕೆ ವಿದ್ವತ್ ಕಾವೇರಪ್ಪ ಈ ಬಾರಿ ಅಚ್ಚರಿಯ ಆಯ್ಕೆ ಈ ಬಾರಿಯ ರಣಜಿ ಟ್ರೋಫಿ ಪಂದ್ಯಾವಳಿಗೆ ಕರ್ನಾಟಕ ತಂಡದ ಆಯ್ಕೆ ನಡೆದ ಸಂದರ್ಭ ಕೊಡಗಿನವರಾದ ಮತ್ತೋರ್ವ ಕ್ರಿಕೆಟಿಗ ಸ್ಪಿನ್ ಬೌಲರ್ ಕೊಂಗಾAಡ ಸಿ. ಕಾರ್ಯಪ್ಪ ಸ್ಥಾನ ಪಡೆದಿದ್ದರು.
ಕರ್ನಾಟಕ ತಂಡದಲ್ಲಿದ್ದ ಮತ್ತೋರ್ವ ಆಟಗಾರ ಪ್ರಸಿದ್ದ್ ಕೃಷ್ಣ ಭಾರತ ತಂಡಕ್ಕೆ ಸೇರ್ಪಡೆಯಾದಾಗ ಇವರ ಸ್ಥಾನ ತುಂಬಲು, ಕರ್ನಾಟಕದ ಪರ ವಿವಿಧ ವಯೋಮಿತಿಯ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿದ್ವತ್ ಕಾವೇರಪ್ಪ ಅವರನ್ನು ಆಯ್ಕೆ ಮಾಡಲಾಗಿತ್ತು. ಇದರಿಂದ ರಾಜ್ಯ ರಣಜಿ ತಂಡದಲ್ಲಿ ಕೊಡಗಿನ ಇಬ್ಬರು ಈ ಬಾರಿ ಸ್ಥಾನ ಪಡೆದಿದ್ದಾರೆ. ಕಾರ್ಯಪ್ಪ ತಂಡದಲ್ಲಿದ್ದರೂ ಇನ್ನೂ ಪಂದ್ಯವಾಡಿಲ್ಲ. ಇದೀಗ ವಿದ್ವತ್ ಕಾವೇರಪ್ಪಗೆ ಚೊಚ್ವಲ ಪಂದ್ಯವನ್ನಾಡುವ ಅವಕಾಶ ಕೂಡಿ ಬಂದಿರುವುದು ಅದೃಷ್ಟವಾಗಿದೆ. ತಾ. ೩ ರಂದು ಚೆನ್ನೆöÊಯಲ್ಲಿ ಪ್ರಾರಂಭ ಗೊಂಡಿರುವ ಪಾಂಡಿಚೇರಿ
(ಮೊದಲ ಪುಟದಿಂದ) ಎದುರಿನ ಪಂದ್ಯದಲ್ಲಿ ತಂಡಕ್ಕೆ ಮರಳಿರುವ ಪ್ರಸಿದ್ದ್ ಕೃಷ್ಣ ಹಾಗೂ ವಿದ್ವತ್ ಇಬ್ಬರೂ ಆಟವಾಡುತ್ತಿದ್ದಾರೆ.
ವಿದ್ವತ್ ಈ ಹಿಂದೆ ಕೆಪಿಎಲ್ ಪಂದ್ಯ ಸೇರಿದಂತೆ, ಕರ್ನಾಟಕದ ಪರ ೧೯ರ ವಯೋಮಿತಿ, ೨೩ರ ವಯೋಮಿತಿಯಲ್ಲಿ ಆಟವಾಡಿ ಸಾಧನೆ ತೋರಿದ್ದಾರೆ. ಮೂಲತಃ ಜಿಲ್ಲೆಯವರಾದ ಧನುಗಾಲದ ನಿವಾಸಿ ಮಾಚಿಮಾಡ ದೇವಾನಂದ್ (ನಂದ) ಹಾಗೂ ಬೀನಾ (ತಾಮನೆ : ಕರ್ತಮಾಡ ಬಿರುನಾಣಿ) ದಂಪತಿಯ ಪುತ್ರ. -ಶಶಿ