ಪೊನ್ನಂಪೇಟೆ, ಮಾ.೩: ಪೊನ್ನಂಪೇಟೆ ನಾಡು ಹುದಿಕೇರಿ ಹೋಬಳಿ ಚಿಕ್ಕಮುಂಡೂರು ಗ್ರಾಮದ ಶ್ರೀ ಭಗವತಿ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನಾ ಕಾರ್ಯ ತಾ. ೭ ರಿಂದ ೧೧ರವರೆಗೆ ನಡೆಯಲಿದೆ.

ತಾ. ೭ರಂದು ಸಂಜೆ ೫ ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಭಂಡಾರ ಮನೆಯಿಂದ ಭಂಡಾರ ಬರುವುದು, ವಾಸ್ತುಹೋಮ, ವಾಸ್ತು ಬಲಿದಾನ ಸೇರಿದಂತೆ ವಿವಿಧ ಪೂಜಾ ಕಾರ್ಯ ಅನ್ನಸಂತರ್ಪಣೆ ನಡೆಯಲಿದೆ.

ತಾ. ೮ರಂದು ಮಹಾಗಣಪತಿ ಹೋಮ, ಆಶ್ಲೇಷಬಲಿ, ನಾಗ ಪ್ರತಿಷ್ಠೆ, ಭದ್ರಕಾಳಿ ಪ್ರತಿಷ್ಠಾಹೋಮ, ಸುಬ್ರಹ್ಮಣ್ಯ ಪ್ರತಿಷ್ಠೆ, ಮಹಾ ಪೂಜೆ, ತೀರ್ಥ ಪ್ರಸಾದ ಅನ್ನಸಂತರ್ಪಣೆ, ಸಂಜೆ ದುರ್ಗಾಪೂಜೆ, ತೂಚಂಬಲಿ, ಅಂದಿಬೊಳಕು ನಡೆಯಲಿದೆ.

ತಾ. ೯ ರಂದು ಬೆಳಗ್ಗೆ ೫.೩೦ ಗಂಟೆಗೆ ಮಹಾಗಣಪತಿ ಹೋಮ, ಬಿಂಬಶುದ್ದಿ ಪೂಜೆ ನಡೆಯಲಿದೆ. ತಾ. ೧೦ ರಂದು ಬೆಳಗ್ಗೆ ೫.೧೫ ಕ್ಕೆ ಇರುಬೊಳಕು, ಭಗವತಿ ಪ್ರತಿಷ್ಠಾ ಹೋಮ, ಸಂಜೆ ೪ ಗಂಟೆದೆ ನೆರವು ಬಲಿ, ದುರ್ಗಾನಮಸ್ಕಾರ ಪೂಜೆ ಶಾಸ್ತವು ಬೇಟೆಕರುಂಬ ದೇವರ ಸನ್ನಿದಾನದಲ್ಲಿ ವಸಂತ ಪೂಜೆ ಅನ್ನಸಂತರ್ಪಣೆ ಹಾಗೂ ತಾ೧೧ರಂದು ಬೆಳಗ್ಗೆ ೬ ಗಂಟೆಗೆ ಚಂಡಿಕಾ ಹೋಮ, ಸಂಜೆ ೪ ಗಂಟೆಗೆ ಎತ್ತುಪೋರಾಟ, ಸುತ್ತುಬಲಿ, ನೃತ್ಯಬಲಿ, ಭಂಡಾರ ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯದೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ.

ಪುನರ್ ಪ್ರತಿಷ್ಠಾಪನಾ ಕಾರ್ಯ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ವೇದಮೂರ್ತಿ ಶ್ರೀ ಎಂ.ಜಿ. ಪಂಡರೀಶ್ ಅರಳಿತ್ತಾಯ ತಂತ್ರಿಗಳು ಹಾಗೂ ತಂಡ ನೇತೃತ್ವದಲ್ಲಿ ನಡೆಸಲಿದೆ.