ಮಡಿಕೇರಿ, ಮಾ. ೩: ನಗರದ ವಿಂಗ್ಸ್ ಆಫ್ ಪ್ಯಾಷನ್ ಡ್ಯಾನ್ಸ್ ಅಕಾಡೆಮಿಗೆ ‘ಕರ್ನಾಟಕ ಕಲಾರತ್ನ ಪ್ರಶಸ್ತಿ’ ಲಭಿಸಿದೆ.

ಬೆಂಗಳೂರಿನ ಸೂಪರ್ ಕಿಡ್ಸ್ ಚಾನಲ್ ವತಿಯಿಂದ ನಡೆದ ಸೂಪರ್ ಡ್ಯಾನ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಸೂಪರ್ ನೃತ್ಯ ಸಂಯೋಜಕಿ ವಿಭಾಗದಲ್ಲಿ ಅಕಾಡೆಮಿಯ ಸ್ಥಾಪಕರು ಹಾಗೂ ನೃತ್ಯ ಸಂಯೋಜಕಿ ಪ್ರೀತ ಕೃಷ್ಣ ಅವರಿಗೆ ಮತ್ತು ಸೂಪರ್ ಕಿಡ್ಸ್ ಜೂನಿಯರ್ ವಿಭಾಗದಲ್ಲಿ ಅನ್ವಿ ಪಿ. ಗೆ “ಕರ್ನಾಟಕ ಕಲಾರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.