ಮಡಿಕೇರಿ, ಮಾ. ೩: ಮಡಿಕೇರಿ ನಗರ ಪೊಲೀಸ್ ಠಾಣೆಯ ಎಸ್‌ಐ ಆಗಿ ಅಂತಿಮ ಅವರು ಹೆಚ್ಚುವರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಸ್ತುತ ನಗರ ಸಂಚಾರಿ ಠಾಣೆಯ ಎಸ್‌ಐ ಆಗಿರುವ ಅಂತಿಮ ಅವರು ಇದೀಗ ಮತ್ತೆ ನಗರಠಾಣೆಯ ಜವಾಬ್ದಾರಿಯನ್ನೂ ಪಡೆದಿದ್ದಾರೆ. ನಗರ ಠಾಣೆಯ ಎಸ್‌ಐ ಆಗಿದ್ದ ಹಮೀದ್ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಇವರಿಗೆ ಪ್ರಬಾರವಾಗಿ ಅಧಿಕಾರ ನೀಡಲಾಗಿದೆ.