*ಗೋಣಿಕೊಪ್ಪ, ಮಾ. ೩: ಶಿವರಾತ್ರಿ ಪ್ರಯುಕ್ತ ಬಸವೇಶ್ವರ ಯುವಕ ಸಂಘದ ವತಿಯಿಂದ ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಮೈದಾನದಲ್ಲಿ ನಡೆದ ಆಪಟ್ಟೀರ ಪಿ. ಚಂಗಪ್ಪ ಸ್ಮರಣಾರ್ಥ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ನಲ್ಲಿ ಅರ್ಷಾದ್-ರಕ್ಷಿತ್ ಜೋಡಿ ಪ್ರಥಮ, ಶಶಾಂಕ್-ನೀಲ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಸಿಂಗಲ್ಸ್ನಲ್ಲಿ ಹರೀಶ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಅರ್ಷಾದ್ ರನ್ನರ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡರು. ಡಬಲ್ಸ್ನಲ್ಲಿ ೧೯ ಜೋಡಿ, ಸಿಂಗಲ್ಸ್ನಲ್ಲಿ ೧೮ ಆಟಗಾರರು ಸ್ಪರ್ಧಿಸಿದ್ದರು.
ಟ್ರೋಫಿ ದಾನಿ ಆಪಟ್ಟೀರ ಸಿ. ಪ್ರದೀಪ್ ಉದ್ಘಾಟಿಸಿದರು. ಈ ಸಂದರ್ಭ ಟ್ರೋಫಿ ದಾನಿ ಸಣ್ಣುವಂಡ ದಿಲಿಪ್ ಸೋಮಣ್ಣ, ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ಕಿರಣ್ ಅಪ್ಪಯ್ಯ, ಗ್ರಾ. ಪಂ. ಸದಸ್ಯ ಸಿ.ಕೆ. ಪ್ರದೀಪ್, ಸ್ಥಳೀಯರಾದ ದರ್ಶನ್ ಬೆಳ್ಯಪ್ಪ, ಸಣ್ಣುವಂಡ ವಿನು ವಿಶ್ವನಾಥ್, ಪುಚ್ಚಿಮಾಡ ರಾಯ್, ನಾಮೇರ ನರೇಶ್, ಕ್ರೀಡಾ ಸಂಚಾಲಕ ಎಚ್. ಡಿ. ರಾಕೇಶ್, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಕೆ. ಡಿ. ಶಾಂತಕುಮಾರ, ಉಪಾಧ್ಯಕ್ಷ ಮಮ್ಮೂಟಿ, ಖಜಾಂಚಿ ಶ್ರೀಕಾಂತ್ ಇದ್ದರು.