ಮಡಿಕೇರಿ, ಮಾ. ೩: ಅರುವತ್ತೊಕ್ಲು ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗೈಡ್ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಮತ್ತು ದ್ವಿತೀಯ ಸೋಪಾನ ಪರೀಕ್ಷೆ ಬರೆದ ಸ್ಕೌಟ್‌ನ ೨೬ ವಿದ್ಯಾರ್ಥಿಗಳು ಹಾಗೂ ಗೈಡ್‌ನ ೧೬ ವಿದ್ಯಾರ್ಥಿನಿಯರು ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಪಿ.ಆರ್. ಪ್ರದೀಪ, ಮನೆಯಪಂಡ ಶೀಲಾ ಬೋಪಣ್ಣ, ಸ್ಕೌಟ್ ಮಾಸ್ಟರ್ ರವಿಚಂದ್ರ, ದೈಹಿಕ ಶಿಕ್ಷಕರಾದ ಪ್ರಮೋದ್, ಶಿಕ್ಷಕಿಯರಾದ ಕೆ.ಕೆ. ವಿದ್ಯಾ ಹಾಗೂ ಬಿ.ಪಿ. ಶಿಲ್ಪಾ ಉಪಸ್ಥಿತರಿದ್ದರು. ಸ್ವಪ್ನ ಸ್ವಾಗತಿಸಿ, ರಾಘವೇಂದ್ರ ನಿರೂಪಿಸಿ ಶಿಲ್ಪಾ ವಂದಿಸಿದರು.