ಮಡಿಕೇರಿ, ಮಾ. ೩: ಕೊಡಗು ಪ್ರೆಸ್ ಕ್ಲಬ್ ಹಾಗೂ ಹಿಯರಿಂಗ್, ಸ್ಪೀಚ್ & ಇಂಪ್ಲಾAಟ್ ಕ್ಲಿನಿಕ್ ವತಿಯಿಂದ ವಿಶ್ವ ಶ್ರವಣ ದಿನದ ಅಂಗವಾಗಿ ಪ್ರೆಸ್ ಕ್ಲಬ್ ಸದಸ್ಯರಿಗೆ ಹಾಗೂ ಕುಟುಂಬ ಸದಸ್ಯರಿಗೆ ಶ್ರವಣ ತಪಾಸಣಾ ಉಚಿತ ಶಿಬಿರ ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಹಿಯರಿಂಗ್, ಸ್ಪೀಚ್ & ಇಂಪ್ಲಾAಟ್ ಕ್ಲಿನಿಕ್‌ನ ಆಡಿಯೋಲಾಜಿಸ್ಟ್ ಸಹನಾ ಎಸ್ ಕದಮ್, ವಿಶ್ವ ಶ್ರವಣ ದಿನದ ಅಂಗವಾಗಿ ಡಬ್ಲೂö್ಯಹೆಚ್‌ಓ ಈ ಬಾರಿ ‘ಹಿಯರಿಂಗ್ ಫಾರ್ ಲೈಫ್ & ಲಿಸನ್ ವಿತ್ ಕೇರ್’ ಎಂಬ ದ್ಯೇಯವಾಕ್ಯದೊಂದಿಗೆ ಅರಿವು ಮೂಡಿಸಲು ಕರೆ ನೀಡಿದೆ. ಅದರಂತೆ ಇಂದು ಜಿಲ್ಲೆಯ ಪತ್ರಕರ್ತರಿಗಾಗಿ ಉಚಿತವಾಗಿ ಶ್ರವಣ ತಪಾಸಣೆ ಮಾಡುವುದರೊಂದಿಗೆ ಶ್ರವಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರಿಗೆ ಕಣ್ಣು ಹಾಗೂ ಕಿವಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಸೂಕ್ಷö್ಮ ವಿಚಾರದ ಸಂದರ್ಭದಲ್ಲಿ ಶ್ರವಣ ಸರಿಯಾಗಿ ಕೇಳಿಸಿ ಕೊಳ್ಳದಿದ್ದರೆ ಅಸ್ಪಷ್ಟ ಮಾಹಿತಿ ಲಭ್ಯವಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಕೊಡಗು ಪ್ರೆಸ್‌ಕ್ಲಬ್ ವಿನೂತನ ಹೆಜ್ಜೆಯಿಟ್ಟು ಹಿಯರಿಂಗ್ ಸ್ಪೀಚ್ & ಇಂಪ್ಲಾAಟ್ ಕ್ಲಿನಿಕ್ ಸಹಯೋಗದೊಂದಿಗೆ ಪತ್ರಕರ್ತರಿಗೆ ಕಿವಿ ತಪಾಸಣಾ ಶಿಬಿರ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮಾಧ್ಯಮ ಕ್ಷೇತ್ರದವರು ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಕೆ ಮಾಡುತ್ತಾರೆ. ಕಿವಿ ನಮ್ಮ ದೇಹದ ಮಹತ್ವದ ಅಂಗವಾಗಿದೆ ಎಂದರು. ಕ್ಲಬ್‌ನ ಸದಸ್ಯ ಜೈರುಸ್ ಥಾಮಸ್ ಅಲೆಕ್ಸಾಂಡರ್ ಸಹಕಾರ ಹಾಗೂ ನಿರ್ದೇಶಕ ನವೀನ್ ಡಿಸೋಜ ಸಂಚಾಲಕತ್ವದಲ್ಲಿ ಪ್ರಥಮ ಬಾರಿಗೆ ಶ್ರವಣ ತಪಾಸಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಲಿನಿಕ್‌ನ ಸಹನಾ ಕದಮ್ ಹಾಗೂ ತಂಡ ಶ್ರವಣ ತಪಾಸಣೆ ನಡೆಸುವುದರೊಂದಿಗೆ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಸಲಹೆಯನ್ನು ನೀಡಿದರು.
ಹಿಯರಿಂಗ್, ಸ್ಪೀಚ್ & ಇಂಪ್ಲಾAಟ್ ಕ್ಲಿನಿಕ್‌ನ ಪಿಆರ್‌ಓ ಜೈರುಸ್ ಥಾಮಸ್ ಅಲೆಕ್ಸಾಂಡರ್, ಸಿಬ್ಬಂದಿ ರಮ್ಯಾ ಸೇರಿದಂತೆ ಪ್ರೆಸ್‌ಕ್ಲಬ್ ಪದಾಧಿಕಾರಿಗಳು ಇದ್ದರು.