ಸೋಮವಾರಪೇಟೆ, ಮಾ.೩: ಸಮೀಪದ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ಜಾತ್ರೋತ್ಸವದ ಅಂಗವಾಗಿ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ನಡೆದ ಮಹಿಳೆಯರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಬೆಂಗಳೂರು ಬಿಎಂಎಸ್ ಕಾಲೇಜು ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಚನ್ನಾಪುರ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಪುರುಷರ ವಿಭಾಗದ ಫುಟ್ಬಾಲ್ನಲ್ಲಿ ಶನಿವಾರಸಂತೆ ಯೋಗಿ ಫ್ರೆಂಡ್ಸ್ ಪ್ರಥಮ ಹಾಗೂ ಕೊಡಿಗೆಹಳ್ಳಿ ಫುಟ್ಬಾಲ್ ಕ್ಲಬ್ ದ್ವಿತೀಯ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಡಾ.ಮಂಥರ್ಗೌಡ, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಬಿ.ಎಂ.ಎಸ್ಟೇಟ್ ಮಾಲೀಕ ಮಂಜುನಾಥ್, ದೇವಾಲಯ ಸಮಿತಿ ಅಧ್ಯಕ್ಷ ಮೊಗಪ್ಪ, ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಅಜ್ಜಳ್ಳಿ, ಸಿ.ಈ.ವೆಂಕಟೇಶ್ ಪ್ರಮುಖರಾದ ದಿನೇಶ್, ಸುಮಂತ್, ಮಹೇಶ್ ಗುರುಪ್ರಸಾದ್ ಉಪಸ್ಥಿತರಿದ್ದು, ಬಹುಮಾನ ವಿತರಿಸಿದರು.