ಪೊನ್ನಂಪೇಟೆ, ಮಾ. ೩: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದು ವರಿದಿದ್ದು, ಪೊನ್ನಂಪೇಟೆ ತಾಲೂಕಿನ ಕೋತೂರು ಗ್ರಾಮದ ವಿಷ್ಣು ಎಂಬವರ ೨ ವರ್ಷದ ಕರು ಹುಲಿ ದಾಳಿಗೆ ಬಲಿಯಾಗಿದೆ.
ಇಂದು ಮುಂಜಾನೆ ೪.೪೫ ರ ವೇಳೆಯಲ್ಲಿ ಕರು ಕಿರುಚಿಕೊಂಡ ಶಬ್ದ ಕೇಳಿ ವಿಷ್ಣು ಅವರು ಹೊರಗೆ ಬಂದು ನೋಡಿದಾಗ ಮನೆಯ ಸಮೀಪವೆ ಇರುವ ಕೊಟ್ಟಿಗೆಯಿಂದ ಹುಲಿ ಕರುವನ್ನು ಎಳೆದೊಯ್ಯುತ್ತಿರುವ ದೃಶ್ಯ ಕಾಣಿಸಿದೆ. ಮನುಷ್ಯರನ್ನು ಕಂಡಕೂಡಲೇ ಹುಲಿ ಕರುವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದೆ. ಮನೆ ಸಮೀಪವೆ ಬಂದು ಬೆಳಗಿನ ಜಾವ ಹುಲಿ ಕರುವನ್ನು ಕೊಂದು ಹಾಕಿರುವುದರಿಂದ ಗ್ರಾಮಸ್ಥರು ಆತಂಕಗೊAಡಿದ್ದಾರೆ.
ಸ್ಥಳಕ್ಕೆ ನಾಗರಹೊಳೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಉಪ ಅರಣ್ಯಾಧಿಕಾರಿ ಗುರುಮೂರ್ತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹುಲಿಯ ಚಲನವಲನ ಗಮನಿಸಲು ಘಟನೆ ನಡೆದ ಸ್ಥಳದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕರುವನ್ನು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ನಾಡಿಗೆ ಬಂದಿರುವ ಹುಲಿಯನ್ನು ಶೀಘ್ರವಾಗಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.