*ಗೋಣಿಕೊಪ್ಪ, ಮಾ. ೩: ಜಿಲ್ಲಾ ದಲಿತ ಸಂಘರ್ಷ ಸಮಿತಿ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ನಡೆಸುತ್ತಿರುವ ಭೂಮಿಗಾಗಿ ನಮ್ಮ ಹೋರಾಟ ಅಹೋರಾತ್ರಿ ಧರಣಿಯ ನಾಲ್ಕನೇ ದಿನದಲ್ಲಿ ಮಕ್ಕಳು ಸಹ ಮೂಲಭೂತ ಹಕ್ಕು ಒದಗಿಸಿಕೊಡಿ ಎಂದು ಆಗ್ರಹಿಸಿ ಪ್ರತಿಭಟನೆಗೆ ಮುಂದಾದರು.

ಪ್ರತಿಭಟನೆಯಲ್ಲಿ ಸೋಮವಾರಪೇಟೆ ತಾಲೂಕು ಮುಖಂಡ ಜಯಪ್ಪ ಹಾನಗಲ್, ನಿವೃತ್ತ ಐ.ಎ.ಎಸ್. ಅಧಿಕಾರಿ ಸಿದ್ದಪ್ಪ, ಹೆಚ್.ಡಿ. ಕೋಟೆ ಭಾಗದ ಮುಖಂಡ ಗಣೇಶ್, ಜಿಲ್ಲಾ ಖಜಾಂಜಿ ಮಹಾದೇವ್, ತಾಲೂಕು ಸಮಿತಿಯ ಕಾಟಿ ಮುರುಗ, ಗಿರೀಶ್, ರಜನಿಕಾಂತ್, ಚೆಲುವ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಡಿಕ್ಕಲ್ ಕುಸುಮಾವತಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು.