ನಾಪೋಕ್ಲು, ಮಾ. ೨: ನಾಪೋಕ್ಲುವಿನ ಕ್ಲಿನಿಕ್ ಒಂದರಲ್ಲಿ ಸೂಕ್ತ ರೀತಿಯ ಚಿಕಿತ್ಸೆ ದೊರೆಯದೆ ಮಗುವೊಂದು ಮೃತಪಟ್ಟ ಹಿನ್ನೆಲೆಯಲ್ಲಿ ಚೆರಿಯಪರಂಬುವಿನ ನಿವಾಸಿ ಅಪ್ಪಣ್ಣ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಕರ್ತವ್ಯ ಲೋಪ ಹಾಗೂ ಅವೈಜ್ಞಾನಿಕ ಚಿಕಿತ್ಸೆಯಿಂದ ಮಗು ಮೃತಪಟ್ಟಿದ್ದು ನಿರ್ಲಕ್ಷö್ಯದಿಂದ ಕೆಲಸ ಮಾಡುವ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಪೊಲೀಸ್ ಠಾಣೆಗೆ ತೆರಳಿ ಒತ್ತಾಯಿಸಿದ್ದಾರೆ.
ಘಟನೆ ವಿವರ: ಪಟ್ಟಣದ ಬೇತು ರಸ್ತೆಯಲ್ಲಿರುವ ಸಿ.ಎಂ.ಸಿ ಕ್ಲಿನಿಕ್ಗೆ ಸೋಮವಾರ ಕಾರ್ಮಿಕ ಅಪ್ಪಣ್ಣ ಪತ್ನಿ ರಾಣಿ ಎಂಬವರು ತಮ್ಮ ೨ ತಿಂಗಳ ಗಂಡು ಮಗುವನ್ನು ಅನಾರೋಗ್ಯದ ಕಾರಣ ಪರೀಕ್ಷಿಸಲು ಕರೆತಂದಿದ್ದರು. ಮಗುವಿನ ಮುಖಕ್ಕೆ ಮಾಸ್ಕ್ ಹಾಕಿ ನೆಬುಲೈಶೇನ್ ಮಾಡಿದ್ದು ಔಷಧಿಯ ಪ್ರಮಾಣ ಹೆಚ್ಚಾಗಿ ಮಗು ಉಸಿರುಗಟ್ಟಿ ಕ್ಲಿನಿಕ್ನಲ್ಲಿ ನಿಧನ ಹೊಂದಿತು. ಗಾಬರಿಗೊಂಡ ವೈದ್ಯರು ಹಾಗೂ ಸಿಬ್ಬಂದಿ ಆ್ಯಂಬುಲೆನ್ಸ್ನಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿನ ವೈದ್ಯರು ಮಗುವಿನ ಉಸಿರಾಟ ಆಗದೆ ನಿಂತು ಹೋಗಿದೆ ಎಂದು ತಿಳಿಸಿದ್ದು ಬಳಿಕ ಸಿ.ಎಂ.ಸಿ ಕ್ಲಿನಿಕ್ನ ವೈದ್ಯರು ಹಾಗೂ ಸಿಬ್ಬಂದಿ ಮಗುವಿನ ತಂದೆತಾಯಿಯನ್ನು ಕರೆಸಿ ಮಡಿಕೇರಿಗೆ ಕರೆದೊಯ್ಯಲು ಸೂಚಿಸಿದ್ದಾರೆ. ಅಲ್ಲಿಯೂ ವೈದ್ಯರು ಮಗು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಉಸಿರುಗಟ್ಟಿ ಮಗು ಮೃತಪಟ್ಟ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ನಾಪೋಕ್ಲು ಠಾಣಾಧಿಕಾರಿ ಸದಾಶಿವ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಸಂದರ್ಭ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕೇಲೆಟಿರ ದೀಪುದೇವಯ್ಯ, ಕಂಗಾAಡ ಜಾಲಿಪೂವಪ್ಪ, ಅಮ್ಮಂಡ ಮನುಮಹೇಶ್, ಶಿವಚಾಳಿಯಂಡ ಜಗದೀಶ್, ಬೊಟ್ಟೋಳಂಡ ಚೇತನ್, ಕುಂಡ್ಯೋಳAಡ ಗಿರಿ ಮತ್ತಿತರ ಗ್ರಾಮಸ್ಥರು ಇದ್ದರು.