೧,೩೯೬ ಭಾರತೀಯರು ಮರಳಿ ಮನೆಗೆ ಉಕ್ರೇನ್-ರಷ್ಯಾದ ನಡುವೆ ಮಾತುಕತೆ

ಉಕ್ರೇನ್, ಫೆ. ೨೮: ಉಕ್ರೇನ್‌ನಲ್ಲಿ ಸಿಲುಕಿದ್ದ ಸುಮಾರು ೮,೦೦೦ ಭಾರತೀಯರು ಉಕ್ರೇನಿನ ನೆರೆಯ ರಾಷ್ಟçಗಳನ್ನು ತಲುಪಿದ್ದು, ಈ ರಾಷ್ಟçಗಳಿಂದ ಸುಮಾರು ೧,೩೯೬ ಭಾರತೀಯರು ೬ ವಿಮಾನಗಳ ಮುಖಾಂತರ ಭಾರತಕ್ಕೆ ಬಂದಿದ್ದಾರೆAದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ತಾ. ೧ ರಂದು (ಇಂದು) ಮತ್ತೆ ೨ ವಿಮಾನಗಳು – ಒಂದು ಹಂಗಾರಿ ದೇಶದ ರಾಜಧಾನಿ ಬುಡಾಪೆಸ್ಟ್ನಿಂದ ಮತ್ತು ಇನ್ನೊಂದು ಬುಚಾರೆಸ್ಟ್ನಿಂದ ನವದೆಹಲಿ ಹಾಗೂ ಮುಂಬೈಗೆ ಬರಲಿವೆ ಎಂದು ತಿಳಿದುಬಂದಿದೆ. ಉಕ್ರೇನಿನ ರಾಜಧಾನಿ ಕ್ವಿವ್‌ನಿಂದ ದೇಶದ ಪಶ್ಚಿಮ ರಾಷ್ಟçಗಳಿಗೆ ಉಚಿತ ರೈಲು ಸಂಪರ್ಕ ಕಲ್ಪಿಸಲಾಗುತ್ತಿದ್ದು, ಭಾರತೀಯರೆಲ್ಲರೂ ಕ್ವಿವ್ ತಲುಪುವಂತೆ ಭಾರತ ಸರಕಾರ ಸೂಚನೆ ನೀಡಿದೆ. ಆದರೆ ಉಕ್ರೇನಿನ ಪೂರ್ವ ಭಾಗದಲ್ಲಿರುವ ಭಾರತೀಯರಿಗೆ ಇದು ಕಷ್ಟಸಾಧ್ಯವಾಗಿದ್ದು, ಕೇಂದ್ರ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತದೆ ಎಂದು ಇನ್ನೂ ಕುತೂಹಲವಿದೆ. ಭಾರತದ ಕೇಂದ್ರ ಸರಕಾರದ ಮಂತ್ರಿಗಳಾದ ವಿ.ಕೆ ಸಿಂಗ್ ಪೊಲ್ಯಾಂಡ್ ದೇಶಕ್ಕೆ, ಕಿರಣ್ ರಿಜಿಜು ಸ್ಲೊವೇಕಿಯಾಗೆ, ಹರ್‌ದೀಪ್ ಸಿಂಗ್ ಪುರಿ ಹಂಗಾರಿಗೆ ಹಾಗೂ ಜ್ಯೋತಿರಾದಿತ್ಯ ಸಿಂದ್ಯಾ ರೊಮೇನಿಯಾಗೆ ತೆರಳಿದ್ದು, ಅಲ್ಲಿಂದ ವಿಮಾನಯಾನದಲ್ಲಿ ಭಾರತಕ್ಕೆ ಮರಳಲಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಸಹಕರಿಸುತ್ತಿದ್ದಾರೆ. ಈ ನಡುವೆ, ರಷ್ಯಾ ಹಾಗೂ ಉಕ್ರೇನ್ ದೇಶಗಳ ಪ್ರಮುಖರು ಮಾತುಕತೆ ನಡೆಸಿದ್ದು, ತಕ್ಷಣ ಕ್ವಿವ್‌ನಲ್ಲಿ ‘ಸೀಸ್‌ಫೈರ್’ ಘೋಷಿಸುವಂತೆ ಉಕ್ರೇನ್ ಪ್ರಮುಖರು ಮನವಿ ಮಾಡಿಕೊಂಡರು ಎನ್ನಲಾಗಿದ್ದು, ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸುವ ಸಾಧ್ಯತೆಗಳು ಕಡಿಮೆಯಿದೆ.

ಮೇಕೆದಾಟು ಪಾದಯಾತ್ರೆ: ಬಿಡದಿಯಿಂದ ನಡಿಗೆ ಮುಂದುವರಿಕೆ

ರಾಮನಗರ/ಬೆAಗಳೂರು, ಫೆ. ೨೮: ಮೇಕೆದಾಟು ಯೋಜನೆಯ ಶೀಘ್ರ ಜಾರಿಗೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು ೨ನೇ ಭಾಗದ ಪಾದಯಾತ್ರೆ ಮುಂದುವರಿದಿದೆ. ಕೋವಿಡ್ ಮೂರನೇ ಅಲೆಯ ಉತ್ತುಂಗ ಸಮಯದಲ್ಲಿ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ಮಾಡಬೇಡಿ ಎಂದು ಹೈಕೋರ್ಟ್ ತಡೆಯಾಜ್ಞೆ ತಂದಿದ್ದರಿAದ ಒಂದು ತಿಂಗಳ ಹಿಂದೆ ಕಾಂಗ್ರೆಸ್‌ನ ಪಾದಯಾತ್ರೆ ರಾಮನಗರದಲ್ಲಿ ಸ್ಥಗಿತಗೊಂಡಿತ್ತು. ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ೨ನೇ ಹಂತದ ಪಾದಯಾತ್ರೆ ಮಾರ್ಚ್ ೩ ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ.

ಸೆಬಿ ನೂತನ ಮುಖ್ಯಸ್ಥರಾಗಿ ಮಾಧಬಿ ಪುರಿ ಬುಚ್ ನೇಮಕ

ನವದೆಹಲಿ, ಫೆ. ೨೮: ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ಮುಖ್ಯಸ್ಥರಾಗಿ ಮೂರು ವರ್ಷದ ಅವಧಿಗೆ ಮಾಧಬಿ ಪುರಿ ಬುಚ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಬುಚ್ ಸೆಬಿಯ ಮಾಜಿ ಪೂರ್ಣವಧಿಯ ಸದಸ್ಯರಾಗಿದ್ದಾರೆ. ಸೆಬಿ ಮುಖ್ಯಸ್ಥರಾಗಿದ್ದ ಅಜಯ್ ತ್ಯಾಗಿ ಅವರ ಅಧಿಕಾರಾವಧಿ ಇಂದಿಗೆ ಕೊನೆಯಾಗಿದ್ದು, ಮೊದಲ ಬಾರಿಗೆ ಮಹಿಳೆಯೊಬ್ಬರು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥೆಯಾಗಲಿದ್ದಾರೆ ಎಂದು ಹಣಕಾಸು ಸಚಿವಾಲಯ ಮೂಲಗಳು ಸ್ಪಷ್ಟಪಡಿಸಿವೆ. ಮಾಧಬಿ ಪುರಿ ಬುಚ್ ಸೆಬಿಯ ಮಾಜಿ ಪೂರ್ಣವಧಿಯ ಸದಸ್ಯರಾಗಿದ್ದು, ಮಾರುಕಟ್ಟೆ ನಿಯಂತ್ರಕದಿAದ ಸ್ಥಾಪಿಸಲಾದ ಹೊಸ ತಂತ್ರಜ್ಞಾನ ಸಮಿತಿಯನ್ನು ಮುನ್ನಡೆಸಲು ಹಿಂದೆ ನಾಮನಿರ್ದೇಶನ ಮಾಡಲಾಗಿತ್ತು. ಬುಚ್ ಅವರು ಸೆಬಿಯ ಡಬ್ಯ್ಯೂಟಿಎಂನ ಮೊದಲ ಮಹಿಳೆ ಮಾತ್ರವಲ್ಲ, ಖಾಸಗಿ ವಲಯದ ಮೊದಲ ಮಹಿಳೆಯೂ ಆಗಿದ್ದಾರೆ. ಐಸಿಸಿ ಬ್ಯಾಂಕ್ ಮೂಲಕ ವೃತ್ತಿ ಜೀವನ ಆರಂಭಿಸಿದ ಬುಚ್, ಐಸಿಸಿಐ ಸೆಕ್ಯುರಿಟೀಸ್ ನ ಎಂಡಿ ಮತ್ತು ಸಿಇಒ ಆಗಿ ಫೆಬ್ರವರಿ ೨೦೦೯ ರಿಂದ ಮೇ ೨೦೧೧ರವರೆಗೂ ಸೇವೆ ಸಲ್ಲಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಪರ ನಿಲ್ಲದ ಭಾರತ: ಟಿ.ಎಂ.ಸಿ. ಶಿವಸೇನೆ ಟೀಕೆ

ನವದೆಹಲಿ, ಫೆ. ೨೮: ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣದ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಪರೂಪದ ವಿಶೇಷ ತುರ್ತು ಅಧಿವೇಶನ ಕರೆಯಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮತದಾನದಿಂದ ಭಾರತ ದೂರ ಉಳಿದಿದ್ದಕ್ಕೆ ಕೇಂದ್ರ ಸರ್ಕಾರವನ್ನು ಕೆಲ ರಾಜಕೀಯ ಮುಖಂಡರು ಸೋಮವಾರ ಟೀಕಿಸಿದ್ದಾರೆ. ಆದಾಗ್ಯೂ, ಈ ವಿಚಾರದ ಬಗ್ಗೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉಕ್ರೇನ್ ವಿರುದ್ಧದ ರಷ್ಯಾದ ಅಕ್ರಮಣವನ್ನು ತಡೆಯಲು ನಿರಾಕರಿಸಿದ್ದಕ್ಕಾಗಿ ಭಾರತದ ವಿರುದ್ಧ ಟಿಎಂಸಿ ಮತ್ತು ಶಿವಸೇನಾ ಮುಖಂಡರು ವಾಕ್ ಪ್ರಹಾರ ನಡೆಸಿದ್ದಾರೆ. ಈಗ ಪರಮಾಣು ಬೆದರಿಕೆ ಹಾಕಲಾಗುತ್ತಿದೆ. ಶಾಂತವಾಗಿರಿ, ತಟಸ್ಥರಾಗಿರಿ ಎಂದು ಶಿವಸೇನಾ ಮುಖಂಡರಾದ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ. ಯುದ್ಧ ರದ್ದತಿಗೆ ಭಾರತ ನಿರಾಕರಿಸುತ್ತದೆ. ಯುದ್ಧ ನಮ್ಮ ಜೀವನದಲ್ಲಿ ದುಬಾರಿ ಎಂಬುದನ್ನು ತೋರಿಸುತ್ತದೆ. ಅಧಿಕಾರಕ್ಕಾಗಿ ಹಸಿದ ಸರ್ವಾಧಿಕಾರಿಗಳು ಎಂದಿಗೂ ಸಹಾಯ ಮಾಡುವುದಿಲ್ಲ ಎಂದು ಟಿಎಂಸಿ ಮುಖಂಡರಾದ ಮಹುವಾ ಮೊಯಿತ್ರಾ ಹೇಳಿದ್ದಾರೆ. ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣ ಕುರಿತು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಿಶೇಷ ಅಧಿವೇಶನ ಕರೆಯಲು ಭದ್ರತಾ ಮಂಡಳಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಿಂದ ಭಾರತ ದೂರ ಉಳಿದರೂ ಬೆಲರೂಸ್ ಗಡಿಯಲ್ಲಿ ರಷ್ಯಾ- ಉಕ್ರೇನ್ ಮಾತುಕತೆ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.