ವೀರಾಜಪೇಟೆ, ಫೆ ೨೮: ಇತ್ತಿಚೇಗೆ ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ದುರ್ಮರಣ ಹೊಂದಿದ ಯೋಧನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆಶ್ರಮದಲ್ಲಿರುವ ನಿರ್ಗತಿಕ ಬಡ ಮಕ್ಕಳಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿ ಸ್ವಯಂ ಸೇವಕರು ಮಾನವೀಯತೆ ಮೆರೆದರು.

ವೀರಾಜಪೇಟೆ ಸ್ವಯಂ ಸೇವಕ ಸ್ನೇಹಿತರ ಬಳಗದ ವತಿಯಿಂದ ಹುತಾತ್ಮ ಹವಾಲ್ದಾರ್ ಅಲ್ತಾಫ್ ಅಹಮ್ಮದ್ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಕೆದಮುಳ್ಳೂರು ಗ್ರಾಮದ ಕಥೆರೀನಾ ಚಿತ್ತಧಿನಿ ನಿರ್ಗತಿಕ ಮಕ್ಕಳ ಕುಠೀರ ಆಶ್ರಮದ ಮಕ್ಕಳಿಗೆ ಒಂದು ದಿನದ ಭೋಜನ ವ್ಯವಸ್ಥೆ ಮತ್ತು ಪಠ್ಯೇತರ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭ ಮಾತನಾಡಿದ ನಿವೃತ್ತ ಸೈನಿಕ ತೋರೆರ ಕುಟ್ಟಪ್ಪ ಅವರು ಸೈನಿಕ ತನ್ನ ಕುಟುಂಬ ತೊರೆದು ದೇಶ ಸೇವೆಗೆ ಅಣಿಯಾಗುತ್ತಾನೆ. ದೇಶದ ರಕ್ಷಣೆಯೇ ಪ್ರಮುಖ ಧ್ಯೇಯ ಎಂದು ಕರ್ತವ್ಯ ನಿರ್ವಹಿಸುತ್ತಾನೆ. ಕರ್ತವ್ಯದ ಸಂದರ್ಭದಲ್ಲಿ ಎದುರಾಗುವ ಸನ್ನಿವೇಶಗಳಿಗೆ ಗಂಡೆದೆಯನ್ನು ಒಡ್ಡಿ ವೀರ ಮರಣವನ್ನಪ್ಪುತ್ತಾನೆ. ದೇಶಪ್ರೇಮಕ್ಕೆ ತಲೆಬಾಗುವ ದೇಶವಾಸಿಗಳು ಹುತಾತ್ಮರನ್ನು ಸದಾ ನೆನೆಯಬೇಕು. ಈ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಆಶ್ರಮದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹುತಾತ್ಮ ಯೋಧರಿಗೆ ಅರ್ಪಿಸುವ ಗೌರವವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಆಶ್ರಮದಲ್ಲಿರುವ ಎಲ್ಲಾ ವಿದ್ಯಾರ್ಥಿ ಗಳಿಗೆ ಪಠ್ಯೇತರ ಸಾಮಗ್ರಿಗಳನ್ನು ವಿತರಿಸಲಾಯಿತು ಮತ್ತು ಮಧ್ಯಾಹ್ನದ ಭೋಜನವನ್ನು ನೀಡಲಾಯಿತು.

ಆಶ್ರಮದ ನಿರ್ವಾಹಕರಾದ ಸಿಸ್ಟರ್ ಅಂಥೋಣಿ ಮೇರಿ, ಕೆದಮುಳ್ಳೂರು

(ಮೊದಲ ಪುಟದಿಂದ) ಗ್ರಾಮ ಪಂಚಾಯಿತಿ ಪಿ.ಡಿ.ಓ ಪ್ರಮೋದ್ ಪಿ.ಕೆ., ನಗರ ಆಟೋ ಮತ್ತು ಚಾಲಕ ಸಂಘದ ಮಾಜಿ ಅಧ್ಯಕ್ಷ

ಎಂ.ಎನ್. ಶೀವು, ಚಿನ್ನ ಬೆಳ್ಳಿ ವರ್ತಕರಾದ ಪ್ರವೀಣ್, ರಾಜೇಶ್ ಆಚಾರ್ಯ, ನಾಣಿಯಪ್ಪ, ಆಟೋ ಚಾಲಕರಾದ ಮಧು, ಮನು, ನೀತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳೇಟಿರ ಸಾಬಾ ಮತ್ತು ಸ್ನೇಹಿತ ಬಳಗದ ಸದಸ್ಯರು ಹಾಜರಿದ್ದರು. -ಕಿಶೋರ್ ಕುಮಾರ್ ಶೆಟ್ಟಿ