ಸೋಮವಾರಪೇಟೆ, ಫೆ. ೨೮: ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ಭಾನುವಾರದಿಂದ ಪ್ರಾರಂಭವಾಯಿತು. ಜಾತ್ರೆಯ ಅಂಗವಾಗಿ ಉಚಿತ ಪಶುಚಿಕಿತ್ಸಾ ಶಿಬಿರ ನಡೆಯಿತು. ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಫುಟ್‌ಬಾಲ್ ಹಾಗು ಮಹಿಳಾ ಥ್ರೋಬಾಲ್ ಪಂದ್ಯಾಟಗಳು ನಡೆದವು. ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಗೌರವಾಧ್ಯಕ್ಷ ಎಚ್.ಆರ್.ಮುತ್ತಣ್ಣ, ಉಪಾಧ್ಯಕ್ಷ ಎಚ್.ಎಂ.ಚAದ್ರಶೇಖರ್, ಗೌಡಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೋಹಿಣಿ, ಸದಸ್ಯರಾದ ಅಜ್ಜಳ್ಳಿ ನವೀನ್, ಸಿ.ಈ.ವೆಂಕಟೇಶ್, ಸಹಾಯಕ ಪಶು ವೈದ್ಯಾಧಿಕಾರಿ ಲೋಕೇಶ್, ದೇವಾಲಯ ಸಮಿತಿಯ ಪದಾಧಿಕಾರಿಗಳಾದ ದಿನೇಶ್, ಟಿ.ಆರ್.ರಾಮಚಂದ್ರ, ಅರ್ಚಕ ವಿಶ್ವರೂಪಚಾರ್ ಇದ್ದರು.