ಚೆಟ್ಟಳ್ಳಿ, ಫೆ. ೨೮: ಅಂತರಾಷ್ಟಿçÃಯ ಮಟ್ಟದ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯಾವಳಿಯ ಮಾದರಿಯಲ್ಲಿ ಕೂರ್ಗ್ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯಾವಳಿ ಗೋಣಿಕೊಪ್ಪಲಿನ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾ. ೧೫ ಹಾಗೂ ೧೬ ರಂದು ಗೋಣಿಕೊಪ್ಪಲಿನ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಭಾಗವಹಿಸುವ ಹತ್ತು ತಂಡಗಳ ಮಾಲೀಕರ ಸಭೆ ಗೋಣಿಕೊಪ್ಪಲಿನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮೀನು ವ್ಯಾಪಾರಿ, ದಾನಿಗಳಾದ ಉಂಬಾಯಿ ಗೋಣಿಕೊಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಯುವ ಫುಟ್ಬಾಲ್ ಆಟಗಾರರು ಇದ್ದಾರೆ. ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂಬ ಕೊರಗು ಇತ್ತು. ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಮೊದಲ ಬಾರಿಗೆ ಐಪಿಎಲ್ ಮಾದರಿಯಲ್ಲಿ ಕೂರ್ಗ್ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯಾವಳಿ ಹಮ್ಮಿಕೊಂಡು ಕೊಡಗಿನ ಯುವ ಫುಟ್ಬಾಲ್ ಆಟಗಾರರಿಗೆ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪಿ. ಎಂ. ಶಂಷುದ್ದೀನ್, ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಜಿಲ್ಲೆಯ ಫುಟ್ಬಾಲ್ ಆಟಗಾರರಿಗೆ ಸುವರ್ಣ ಅವಕಾಶ ನೀಡಿದ್ದು, ಇದನ್ನು ಎಲ್ಲಾ ಆಟಗಾರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಸಭೆ ಆರಂಭಕ್ಕೂ ಮುನ್ನ ಹಿಮಪಾತದಲ್ಲಿ ಸಿಲುಕಿ ಮರಣ ಹೊಂದಿದ ಕೊಡಗಿನ ಯೋಧ ಅಲ್ತಾಫ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಮೊದಲ ಆವೃತ್ತಿಯಲ್ಲಿ, ಕೆ.೧೨ ಎಫ್.ಸಿ ಬಾಳೆಲೆ (ಶಕ್ತಾರ್ ಡೊನೆಟೆಸ್ಕ್), ರೈಡರ್ಸ್ ಗೋಣಿಕೊಪ್ಪ (ಮ್ಯಾಂಚೆಸ್ಟರ್ ಯುನೈಟೆಡ್), ಎ.ಒನ್ ಗೋಣಿಕೊಪ್ಪ (ಜುವೆಂಟ್ಸ್), ಹಿಂದೂಸ್ತಾನ್ ಸೈಕ್ಲೋನ್ ಪೊನ್ನಂಪೇಟೆ (ಚೆಲ್ಸಿ), ಮಿಲನ್ಸ್ ಎಫ್.ಸಿ ಅಮ್ಮತ್ತಿ (ಎ.ಸಿ ಮಿಲನ್), ನೆಹರು ಎಫ್.ಸಿ ಪಾಲಿಬೆಟ್ಟ (ರಿಯಲ್ ಮ್ಯಾಡ್ರಿಡ್) ಎಸ್.ಜಿ.ಎಮ್ ಎಫ್.ಸಿ ಗೋಣಿಕೊಪ್ಪ (ಮ್ಯಾಂಚೆಸ್ಟರ್ ಸಿ.ಟಿ) ಬೊಟ್ಯತ್ನಾಡ್ ಕುಂದಾ (ಲಿವರ್ಪೂಲ್), ಆಕ್ಸ್ಫರ್ಡ್ ವೀರಾಜಪೇಟೆ (ಅಥ್ಲೆಟಿಕೋ ಡಿ ಮ್ಯಾಡ್ರಿಡ್), ಹಾಗೂ ಎಲ್.ಬಿ ಯೋಗೇಶ್ ಎಫ್.ಸಿ ಒಂಟಿಯAಗಡಿ (ಲಾಝಿಯೋ) ಸೇರಿ ಹತ್ತು ತಂಡಗಳು ಭಾಗವಹಿಸಲಿವೆ.
ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ತಾ. ೦೪ ರಂದು ಗೋಣಿಕೊಪ್ಪಲಿನಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಕುಮಾರ್ ಡಿ. ಎಸ್. ಕಾರ್ಯದರ್ಶಿ ಬಶೀರ್ ಪಿ. ಆರ್. ಮತ್ತಿತರರು ಹಾಜರಿದ್ದರು.