ಶನಿವಾರಸಂತೆ, ಫೆ. ೨೮: ಸಮೀಪದ ಗಡಿಭಾಗ ಹೊಸೂರು ಗ್ರಾಮದ ಇತಿಹಾಸ ಪ್ರಸಿದ್ಧ ಚೋಳರ ಕಾಲದ ಶ್ರೀ ಬೆಟ್ಟದ ಬಸವೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾ. ೧ರಂದು (ಇಂದು) ರಾತ್ರಿ ೮ ಗಂಟೆಗೆ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಯನ್ನು ಏರ್ಪಡಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.